Sign In

By signing in or creating an account, you agree with Associated Broadcasting Company's Terms & Conditions and Privacy Policy.

Yatnal rushed to hospital: ವಿಧಾನ ಸಭೆಯಲ್ಲಿ ಕುಸಿದು ಬಿದ್ದ ಶಾಸಕ ಬಸನಗೌಡ ಯತ್ನಾಳ್, ಬಿಪಿ ಹೊರತು ಯಾವುದೇ ಸಮಸ್ಯೆಯಿಲ್ಲ ಎಂದ ವೈದ್ಯರು

Yatnal rushed to hospital: ವಿಧಾನ ಸಭೆಯಲ್ಲಿ ಕುಸಿದು ಬಿದ್ದ ಶಾಸಕ ಬಸನಗೌಡ ಯತ್ನಾಳ್, ಬಿಪಿ ಹೊರತು ಯಾವುದೇ ಸಮಸ್ಯೆಯಿಲ್ಲ ಎಂದ ವೈದ್ಯರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2023 | 7:26 PM

ಅವರಿಗೆ ಯಾವುದೇ ತೊಂದರೆಯಿಲ್ಲ, ವೈದ್ಯರೊಂದಿಗೆ ಮಾತಾಡುತ್ತಿದ್ದಾರೆ. 24 ಗಂಟೆಗಳ ಕಾಲ ಅಬ್ಸರ್ವೇಶನ್ ನಲ್ಲಿ ಇಡಲಾಗಿದೆ ಎಂದು ಅಲ್ಲಿನ ವೈದ್ಯರೊಬ್ಬರು ಹೇಳಿದ್ದಾರೆ.

ಬೆಂಗಳೂರು: ವಿಧಾನ ಸಭೆಯಲ್ಲಿ ಇಂದು ಗದ್ದಲ, ಆಕ್ರೋಶ, ರೇಗಾಟ-ಚೀರಾಟ-ಹಾರಾಟ, ಮಾತು-ಪ್ರತಿಮಾತು, ಬೈಗುಳ-ಪ್ರತಿಬೈಗುಳ-ಇವೇ ನಡೆದಿದ್ದು. ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಬಳಿಕ ಪಕ್ಷದ ನಾಯಕರು ಧರಣಿಗೆ ಕುಳಿತರು. ಏತನ್ಮಧ್ಯೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil atnal) ಸದನದೊಳಗೆ ನಿಗ್ಗಲು ಪ್ರಯತ್ನಿಸಿದರೋ ಅಥವಾ ಬೇರೇನು ಮಾಡಿದರೋ ಅಂತ ಗೊತ್ತಾಗಿಲ್ಲ. ಮಾರ್ಷಲ್ ಗಳ ಎಳೆದಾಟದಲ್ಲಿ ಅವರು ಬಸವಳಿದು ಕುಸಿದು ಬಿದ್ದರು. ಕೂಡಲೇ ವಿಜಯಪುರ ಶಾಸಕರನ್ನು ವ್ಹೀಲ್ ಚೇರ್ ಕೂರಿಸಿ ವಿಧಾನ ಸೌಧ (Vidhana Soudha) ಆವರಣದಲ್ಲಿ ನಿಂತಿದ್ದ ಅಂಬ್ಯುಲೆನ್ಸ್ ವರೆಗೆ ತಳ್ಳಿಕೊಂಡು ಬಂದು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಲಭ್ಯವಿರುವ ಮಾಹಿತಿ ಪ್ರಕಾರ ಯತ್ನಾಳ್ ಅವರನ್ನು ಫೋರ್ಟೀಸ್ (Fortis Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರ ಪ್ರಕಾರ ಶಾಸಕರ ರಕ್ತದೊತ್ತಡ ಹೆಚ್ಚಾಗಿದೆ ಮತ್ತು ಹ್ರದ್ರೋಗ ತಜ್ಞರು ಇಸಿಜಿ ಮಾಡಿದ್ದು ಅದು ನಾರ್ಮಲ್ ಆಗಿದೆ. ಅವರಿಗೆ ಯಾವುದೇ ತೊಂದರೆಯಿಲ್ಲ, ವೈದ್ಯರೊಂದಿಗೆ ಮಾತಾಡುತ್ತಿದ್ದಾರೆ. 24 ಗಂಟೆಗಳ ಕಾಲ ಅಬ್ಸರ್ವೇಶನ್ ನಲ್ಲಿ ಇಡಲಾಗಿದೆ ಎಂದು ಅಲ್ಲಿನ ವೈದ್ಯರೊಬ್ಬರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ