ನಾನೂ ರಾಮಭಕ್ತ, ರಾಮನ ಜೊತೆ ಎಲ್ಲ ದೇವರುಗಳನ್ನು ಪೂಜಿಸುತ್ತೇನೆ: ಇಕ್ಬಾಲ್ ಹುಸ್ಸೇನ್, ಕಾಂಗ್ರೆಸ್ ಶಾಸಕ

ಬೇರೆ ಪಕ್ಷಗಳು ರಾಮನನ್ನು, ಧರ್ಮವನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಾರೆ, ಅದರೆ ಕಾಂಗ್ರೆಸ್ ಯಾವತ್ತೂ ರಾಜಕೀಯದಲ್ಲಿ ಧರ್ಮ ಬೆರೆಸುವುದಿಲ್ಲ, ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ, ಬದ್ಧತೆ ಮತ್ತು ಶಿಸ್ತು ಇದೆ ಎಂದು ಹೇಳಿದರು. ಧರ್ಮ ಮತ್ತು ರಾಜಕಾರಣ ಎರಡು ಪ್ರತ್ಯೇಕ ಆಯಾಮಗಳು ಎಂದು ಶಾಸಕ ಹೇಳಿದರು.

ನಾನೂ ರಾಮಭಕ್ತ, ರಾಮನ ಜೊತೆ ಎಲ್ಲ ದೇವರುಗಳನ್ನು ಪೂಜಿಸುತ್ತೇನೆ: ಇಕ್ಬಾಲ್ ಹುಸ್ಸೇನ್, ಕಾಂಗ್ರೆಸ್ ಶಾಸಕ
|

Updated on: Jan 04, 2024 | 3:14 PM

ರಾಮನಗರ: ನಾನೂ ರಾಮನ ಭಕ್ತ ಮತ್ತು ರಾಮನಗರದಲ್ಲಿ ಎಲ್ಲ ಪಕ್ಷದವರು, ಧರ್ಮದವರು ಸೇರಿ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ (school days), ಸರಸ್ವತಿ ಪೂಜೆ, ಲಕ್ಷ್ಮಿ ಪೂಜೆ, ಗಣೇಶನ ಪೂಜೆ ಜೊತೆ ರಾಮನ ಪೂಜೆಯೂ ಮಾಡಿದ್ದಾಗಿ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ (Ram Mandir in Ayodhya) ನಿರ್ಮಾಣವಾಗಿರೋದನ್ನು ಸ್ವಾಗತಿಸುತ್ತೀರಾ ಅಂತ ಕೇಳಿದಾಗ ಅವರು, ಬೇರೆ ಪಕ್ಷಗಳು ರಾಮನನ್ನು, ಧರ್ಮವನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಾರೆ, ಅದರೆ ಕಾಂಗ್ರೆಸ್ ಯಾವತ್ತೂ ರಾಜಕೀಯದಲ್ಲಿ ಧರ್ಮ ಬೆರೆಸುವುದಿಲ್ಲ, ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ, ಬದ್ಧತೆ ಮತ್ತು ಶಿಸ್ತು ಇದೆ ಎಂದು ಹೇಳಿದರು. ತಾನು ಎಲ್ಲ ದೇವರುಗಳನ್ನು ಆರಾಧಿಸಿ ಪೂಜಿಸುವುದಾಗಿ ಹೇಳಿದ ಶಾಸಕ ತನ್ನ ಮನೆಯಲ್ಲಿ ಪೂಜಾ ಸ್ಥಳ ಮತ್ತು ಪೂಜಾ ಕೋಣೆಯನ್ನು ವ್ಯವಸ್ಥೆ ಮಾಡಿಕೊಂಡಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us