ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಟಿಕೆಟ್ ಪಡೆವ ವಿಶ್ವಾಸವಿದೆ: ಯೋಗೇಶ್ವರ್
ಒಂದು ಪಕ್ಷ ತನಗೆ ಟಿಕೆಟ್ ಸಿಗದೆ ಹೋದರೆ ಕಾರ್ಯಕರ್ತರು ಹೇಳಿದಂತೆ ಮಾಡುವ ಬೆದರಿಕೆಯನ್ನು ಯೋಗೇಶ್ವರ್ ಬಿಜೆಪಿ ನಾಯಕತ್ವಕ್ಕೆ ಸವಾಲೊಡ್ಡುತ್ತಾರೆ. ಟಿಕೆಟ್ ಸಿಗದಿದ್ದರೆ ತನ್ನ ಮುಂದೆ ಬೇರೆ ಆಪ್ಷನ್ ಗಳಿವೆ ಅನ್ನೊದನ್ನು ಅವರು ಅಪರೋಕ್ಷವಾಗಿ ಹೇಳಿದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ರಾಮನಗರ: ಹಿರಿಯ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ರಾಮನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಜೊತೆ ಯಾವುದೇ ಗೊಂದಲವಿಲ್ಲ, ಎರಡೂ ಪಕ್ಷಗಳ ನಾಯಕರು ಒಮ್ಮತದ ನಿರ್ಧಾರ ತೆಗದುಕೊಳ್ಳುತ್ತಾರೆ, ಎಲ್ಲ ಸಮೀಕ್ಷೆಗಳಲ್ಲಿ ತಾನೇ ಯೋಗ್ಯ ಅಭ್ಯರ್ಥಿಯೆಂದು ಸಾಬೀತಾಗಿರುವುದರಿಂದ ಟಿಕೆಟ್ ಸಿಗುವ ಬಗ್ಗೆ ಆತ್ಮವಿಶ್ವಾಶ ಇದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಿಂದ ಯೋಗೇಶ್ವರ್ ಲೋಕಸಭೆಗೆ ಸ್ಪರ್ಧಿಸಲಿ ಅಂತ ಹೇಳಿದ್ದೆ: ಕುಮಾರಸ್ವಾಮಿ