ಸ್ಯಾಂಟ್ರೋ ರವಿಯೋ ಸಿಟಿ ರವಿಯೋ ಅಂತ ಕನ್ಫ್ಯೂಸ್ ಅಗುತ್ತಿದೆ ಎಂದರು ಸಿ ಎಮ್ ಇಬ್ರಾಹಿಂ!

ಸ್ಯಾಂಟ್ರೋ ರವಿಯೋ ಸಿಟಿ ರವಿಯೋ ಅಂತ ಕನ್ಫ್ಯೂಸ್ ಅಗುತ್ತಿದೆ ಎಂದರು ಸಿ ಎಮ್ ಇಬ್ರಾಹಿಂ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 17, 2023 | 2:58 PM

ಈ ಪ್ರಕರಣ ಕೂಡ ಬೇರೆ ಪ್ರಕರಣಗಳ ಹಾಗೆ ಹಳ್ಳ ಹಿಡಿಯೋದು ಶತಸಿದ್ಧ, ಇದನ್ನು ತಾನು ಹೇಳುತ್ತಿಲ್ಲ, ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ, ಎಂದು ಇಬ್ರಾಹಿಂ ಹೇಳಿದರು.

ಬೆಂಗಳೂರು:  ಕಾಂಗ್ರೆಸ್ ಮತ್ತು ಬಿಜೆಪಿ ಎಷ್ಟೇ ಓಲೈಕೆ ರಾಜಕಾರಣ ಮಾಡಿದರೂ ಈ ಬಾರಿ ಮುಸ್ಲಿಂ ಸಮುದಾಯದ ಮತ್ತದಾರರೆಲ್ಲ ಜೆಡಿ(ಎಸ್) ಪಕ್ಷಕ್ಕೆ ವೋಟು ಹಾಕೋದು ಶತಸಿದ್ಧ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಹೇಳಿದರು. ಬೆಂಗಳೂರಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತಾಡಿದ ಅವರು ಸ್ಯಾಂಟ್ರೋ ರವಿಯ (Santro Ravi) ಬಗ್ಗೆ ಪ್ರಶ್ನೆ ಕೇಳಿದಾಗ ಸ್ಯಾಂಟ್ರೋ ರವಿಯೋ ಸಿಟಿ ರವಿಯೋ ಅಂತ ಗೊಂದಲವಾಗುತ್ತಿದೆ. ಈ ಪ್ರಕರಣ ಕೂಡ ಬೇರೆ ಪ್ರಕರಣಗಳ ಹಾಗೆ ಹಳ್ಳ ಹಿಡಿಯೋದು ಶತಸಿದ್ಧ, ಇದನ್ನು ತಾನು ಹೇಳುತ್ತಿಲ್ಲ, ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಹೇಳಿದ್ದಾರೆ, ಎಂದು ಇಬ್ರಾಹಿಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ