ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಕಿಚ್ಚ ಸುದೀಪ್ ಅವರು ಯುದ್ಧ ಮಾಡೋದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅವರು ನೀಡಿದ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಹೇಳಿಕೆ ಸಂಬಂಧ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರರಂಗಕ್ಕೆ ಬಂದಿದ್ದು ನಟಿಸೋಕೆ ಗಲಾಟೆ ಮಾಡಿಕೊಳ್ಳೋಕೆ ಅಲ್ಲ’ ಎಂದು ಅವರು ಹೇಳಿದರು. ಸುದೀಪ್ ನೀಡಿದ ಹೇಳಿಕೆ ಬಗ್ಗೆ ಇಲ್ಲಿದೆ ವಿವರ.
ಇತ್ತೀಚೆಗೆ ವಿಜಯಲಕ್ಷ್ಮೀ ಅವರು ‘ಕ್ಲಾಸ್ ಫ್ಯಾನ್ಸ್’ ಎಂದು ಉಲ್ಲೇಖಿಸಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ವಿಷಯದ ಬಗ್ಗೆ ಕೇಳಿದಾಗ, ‘ಕಪಾಳಕ್ಕೆ ಹೊಡೆದರೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನು ನಾನಲ್ಲ. ನಾನು ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡಿಕೊಳ್ಳೋಕೆ ಅಲ್ಲ, ನಟನೆ ಮಾಡೋಕೆ’ ಎಂದು ಸುದೀಪ್ ಹೇಳಿದರು. ‘ಯಾವುದು ಸರಿ ಎಂಬುದಕ್ಕೆ ನಾನು ನಿಲ್ಲುತ್ತೇನೆ’ ಎಂದು ಹೇಳಿದರು ಕಿಚ್ಚ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
