Shivarajkumar: ‘ಯಾಕ್ರಿ ಕೂರಿಸ್ತೀರ? ನಂಗಿನ್ನೂ 60 ವರ್ಷ’: ‘ರೇಮೊ’ ಟ್ರೇಲರ್ ಲಾಂಚ್ ವೇಳೆ ಶಿವಣ್ಣ ಹೀಗೆ ಹೇಳಿದ್ದೇಕೆ?
Raymo Trailer Launch Event: ಶಿವರಾಜ್ಕುಮಾರ್ ಮಾತು ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಯುವಕರಿಗೂ ಸ್ಫೂರ್ತಿ ನೀಡುವಂತಿದೆ ಅವರ ಎನರ್ಜಿ.
ನಟ ಶಿವರಾಜ್ಕುಮಾರ್ (Shivarajkumar) ಅವರು ಅನೇಕ ಚಿತ್ರತಂಡಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ, ಇಂದು (ನ.6) ಅವರು ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯ ‘ರೇಮೊ’ (Raymo) ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಬೆನ್ನು ತಟ್ಟಿದ್ದಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ಅವರನ್ನು ಸನ್ಮಾನಿಸುವಾಗ ಕುರ್ಚಿ ಹಾಕಿ ಕೂರಿಸಲು ನಿರ್ಮಾಪಕ ಸಿ.ಆರ್. ಮನೋಹರ್ ಮುಂದಾದರು. ಈ ವೇಳೆ ಪ್ರತಿಕ್ರಿಯಿಸಿದ ಶಿವಣ್ಣ, ‘ನಂಗೆ ಇನ್ನೂ ವಯಸ್ಸು ಆಗಿಲ್ಲ. ಯಾಕ್ರಿ ನನ್ನ ಕೂರಿಸ್ತೀರ? ನಂಗಿನ್ನೂ 60 ವರ್ಷ ಅಷ್ಟೇ. ನಾನು 100 ವರ್ಷ ಇರಬಾರದಾ ಹೇಳಿ’ ಎಂದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos