ಯಶವಂತಪುರದ ಚಿನ್ನಾಭರಣ ಅಂಗಡಿಗಳಲ್ಲಿ ಕಳ್ಳಿಯೊಬ್ಬಳು ಆಭರಣ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಪೊಲೀಸರಿಗೆ ದೂರು
ಪ್ರಾಯಶಃ ಬೆಂಗಳೂರಿನ ಯಶವಂತಪುರ ನಿವಾಸಿಯಾಗಿರಬಹುದಾದ ಕಳ್ಳಿ ಅದೇ ಏರಿಯಾದ ಎರಡು ಚಿನ್ನಾಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು: ಇಂಥ ಕೈಚಳಕ, ಜಾಣ್ಮೆ, ಚಾಲಾಕಿತನ ಈಯಮ್ಮ ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಬದುಕನ್ನು ನೇರವಾಗಿಸಿಕೊಂಡು ನೆಮ್ಮದಿಯಿಂದ ಜೀವಿಸಬಹುದು. ಈಕೆಯ ಹೆಸರು ನಾಡಿಯಾ (Nadiya) ಅಂತ ಪೊಲೀಸರಿಂದ ನಮಗೆ ಗೊತ್ತಾಗಿದೆ. ಪ್ರಾಯಶಃ ಬೆಂಗಳೂರಿನ ಯಶವಂತಪುರ (Yashwanthpur) ನಿವಾಸಿಯಾಗಿರಬಹುದಾದ ಕಳ್ಳಿ ಅದೇ ಏರಿಯಾದ ಎರಡು ಚಿನ್ನಾಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅಂಗಡಿಗಳ ಮಾಲೀಕರು ಯಶವಂತಪುರ ಪೊಲೀಸ್ ಠಾಣೆಯಲ್ಲಿ (police station) ದೂರು ದಾಖಲಿಸಿದ್ದಾರೆ.
Latest Videos