ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ಸು ಹೋಗಲು ನಂಗೇನು ಹುಚ್ಚಾ? ಲಕ್ಷ್ಮಣ ಸವದಿ, ಅಥಣಿ ಶಾಸಕ

|

Updated on: Feb 06, 2024 | 5:38 PM

ಬಿಜೆಪಿಯಲ್ಲಿ ಅವಮಾನಕ್ಕೀಡಾಗಿ ನೋವು ಅನುಭವಿಸುತ್ತಿದ್ದ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನಗೆ ಆಶ್ರಯ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ವಾಸ್ತವತೆ ಹೀಗಿರುವಾಗ ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ ಹೇಳಿದರು.

ದೆಹಲಿ: ಲಕ್ಷ್ಮಣ ಸವದಿ (Laxman Savadi) ಅವರ ಡಿಎನ್ ಎ ಬಿಜೆಪಿ ಜೊತೆ ಮ್ಯಾಚ್ ಆಗುತ್ತೆ ಅವರ ಮೈಯಲ್ಲಿ ಬಿಜೆಪಿ ರಕ್ತ ಹರಿಯುತ್ತಿದೆ, ಜಗದೀಶ್ ಶೆಟ್ಟರ್ (Jagadish Shettar) ಹಾಗೆ ಬಿಜೆಪಿಗೆ ಬರೋದು ಗ್ಯಾರಂಟಿ ಅಂತ ಬಿಜೆಪಿ ನಾಯಕರು (BJP leaders) ಹೇಳುತ್ತಿದ್ದಾರೆ ಅಂತ ದೆಹಲಿಯ ಟಿವಿ9 ವರದಿಗಾರ ಅಥಣಿ ಶಾಸಕನಿಗೆ ಹೇಳಿದಾಗ ಅವರು ಕೆಂಡಾಮಂಡಲರಾದರು. ನಾನು ನಮ್ಮಪ್ಪನಿಗೆ ಹುಟ್ಟಿದ್ದು ಮತ್ತು ನನ್ನ ಮೈಯಲ್ಲಿ ನಮ್ಮಪ್ಪನ ರಕ್ತ ಹರಿಯುತ್ತಿದೆ, ಬೇರೆಯವರ ಡಿಎನ್ ತೆಗೆದುಕೊಂಡು ಏನ್ ಮಾಡ್ಲಿ ಎಂದು ಕಿಡಿ ಕಾರಿದರು. ಶೆಟ್ಟರ್ ವಾಪಸ್ಸು ಹೋಗಿದ್ದಾರೆ ಅಂತ ಎಲ್ಲ ಅವರ ದಾರಿ ತುಳಿಯಬೇಕಾ? ಅವರಿಗಿಂತ ಮೊದಲು ತಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಅಮೇಲೆ ಅವರು ಬಂದು ವಾಪಸ್ಸು ಕೂಡ ಹೋದರು, ಅವರ ಹಾಗೆ ತಾನು ಮಾಡಬೇಕಿಲ್ಲ ಎಂದು ಸವದಿ ಹೇಳಿದರು. ಬಿಜೆಪಿಯಲ್ಲಿ ಅವಮಾನಕ್ಕೀಡಾಗಿ ನೋವು ಅನುಭವಿಸುತ್ತಿದ್ದ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನಗೆ ಆಶ್ರಯ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ವಾಸ್ತವತೆ ಹೀಗಿರುವಾಗ ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ