Bigg Boss Kannada Season 11: ನಾನು ರೆಬೆಲ್ ಅಲ್ಲ, ಮಾನಸಿಕವಾಗಿ ಸದೃಢಳಾಗಿರುವ ವ್ಯಕ್ತಿ: ಗೌತಮಿ ಜಾಧವ್

Updated on: Jan 20, 2025 | 7:21 PM

Bigg Boss Kannada Season 11: ಗೌತಮಿಯವರ ಪತಿ ಅಭಿಷೇಕ್​ಗೆ ಪತ್ನಿ ಗೆದ್ದೇ ಗೆಲ್ಲುತ್ತಾರೆ ಇಲ್ಲವೇ ಫಿನಾಲೆ ವಾರವಾದರೂ ತಲುಪುತ್ತಾರೆ ಎಂಬ ವಿಶ್ವಾಸ ಇತ್ತಂತೆ, ಅದರೆ ಅವರಿಗೆ ತುಂಬಾ ನಿರಾಶೆಯಾಗಿದೆ ಎಂದು ಗೌತಮಿ ಹೇಳುತ್ತಾರೆ. ಮನೆಗೆ ವಾಪಸ್ಸು ಬಂದಿರೋದು ಮಕ್ಕಳೊಂದಿಗೆ ಪುನರ್ಮಿಲನ, ಬಹಳ ಖುಷಿ ನೀಡಿದೆ ಎನ್ನುವ ಅವರು ಬಿಗ್ ಬಾಸ್ ಸೀಸನ್ ಗೆಲ್ಲಲಾಗದಿದ್ದರೂ ತನ್ನ ವ್ಯಕ್ತಿತ್ವ ಗೆದ್ದಿದೆ ಎನ್ನುತ್ತಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ತಲುಪಲಾಗದೆ ಶನಿವಾರದಂದು ಹೊರಬಿದ್ದ ಸ್ಪರ್ಧಿ ಗೌತಮಿ ಜಾಧವ್ ತಾನು ಮನೆಯಲ್ಲಿದಷ್ಟು ದಿನ ಚೆನ್ನಾಗಿ ಆಡಿದ್ದರ ಬಗ್ಗೆ ಅಭಿಮಾನ ಮತ್ತು ಆತ್ಮವಿಶ್ವಾಸದಿಂದ ಮಾತಾಡುತ್ತಾರೆ. ಸೀಸನ್ ಗೆಲ್ಲದೆ ಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸುವ ಗೌತಮಿ, ತಾನು ರೆಬೆಲ್ ಅಂತ ಜನ ಭಾವಿಸಿದ್ದಾರೆ, ತಾನು ರೆಬೆಲ್ ಅಲ್ಲ ಆದರೆ ಮಾನಸಿಕವಾಗಿ ಬಹಳ ಸ್ಟ್ರಾಂಗ್; ಹಾಗೆಯೇ ಭಾವುಕ ಜೀವಿಯೂ ಹೌದು ಅಂತ ಹೇಳುತ್ತಾರೆ. ಬಿಗ್ ಬಾಸ್ ಮನೆ ಸೇರಿದ ಕಾರಣಕ್ಕೆ ತನ್ನ ವ್ಯಕ್ತಿತ್ವ ಬದಲಾಯಿಸುವ ಗೋಜಿಗೇನೂ ಹೋಗಲಿಲ್ಲ, ಹೊರಗಡೆ ಹೇಗಿರ್ತೀನೋ ಅಲ್ಲೂ ಹಾಗೆಯೇ ಇದ್ದೆ ಎಂದು ಗೌತಮಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಾಸಿಟಿವಿಟಿ ಬಿಟ್ಟು ವೈಲೆಂಟ್ ಆದ ಗೌತಮಿ ಜಾಧವ್; ರಜತ್​ಗೆ ಕೊಟ್ಟರು ಠಕ್ಕರ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More