ಅದು ಮದ್ದೂರು ಕ್ಷೇತ್ರದ ಬಗ್ಗೆ ಮಾತಾಡಿದ್ದು, ಪೂರ್ತಿ ಆಡಿಯೋವನ್ನು ಬಿಡುಗಡೆ ಮಾಡಲಿ: ಕುಮಾರಸ್ವಾಮಿ

|

Updated on: Nov 06, 2024 | 6:24 PM

ತಾನು ಹಾಗೆ ಮಾತಾಡುವ ಪ್ರಸಂಗವೇ ಉದ್ಭವಿಸಲ್ಲ, ಯಾಕೆಂದರೆ 2004ರಲ್ಲಿ ರಾಮನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮಾತ್ರ ಹಳ್ಳಿಹಳ್ಳಿಗೆ ಭೇಟಿ ನೀಡಿದ್ದು, ಅದಾದ ಬಳಿಕ ತಾನು ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿ ಕಾರ್ಯಕರ್ತರೇ ತನ್ನ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರಚಾರದ ವೇಳೆ ಆಡಿಯೋವೊಂದನ್ನು ಡಿಕೆ ಸುರೇಶ್ ಮಾಡಿರುವುದಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಕುಮಾರಸ್ವಾಮಿ, ಡಿಕೆ ಬ್ರದರ್ಸ್ ಮತ್ತು ಯೋಗೇಶ್ವರ್ ಮೊದಲಾದವರೆಲ್ಲ ಸಿಡಿ ಪ್ಲೇಯರ್ಸ್, ಅದು ತಾನು ಮದ್ದೂರು ಕ್ಷೇತ್ರದ ಬಗ್ಗೆ ಆಡಿರುವ ಮಾತು, ಅಲ್ಲಿನ ಜೂಜುಕೋರರು, ಕ್ರಿಕೆಟ್ ಬೆಟ್ಟಿಂಗ್​​ನಲ್ಲಿ ಶಾಮೀಲಾಗಿರುವವರು ಚುನಾವಣೆಯಲ್ಲಿ ಸ್ಪರ್ಧಿಸಿ, ಅಭಿವೃದ್ಧಿ ಮಾಡುವವರು ಮಾಡಿಕೊಳ್ಳಲಿ, ನಾವು ಎರಡು ದಿನಗಳಲ್ಲಿ ಚಿತ್ರಣ ಬದಲಾಯಿಸುತ್ತೇವೆ ಅಂತ ಹೇಳಿರುವುದನ್ನು ತಾನು ಉಲ್ಲೇಖಿಸಿದ್ದು ಆ ಆಡಿಯೋದಲ್ಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಾತಾಡಿದ ಆಡಿಯೋವೊಂದನ್ನು ಬಿಡುಗಡೆ ಮಾಡಿದ ಡಿಕೆ ಸುರೇಶ್