Loading video

RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!

|

Updated on: Apr 03, 2025 | 1:04 PM

IPL 2025 RCB vs GT: ಇಂಡಿಯನ್ ಪ್ರೀಮಿಯರ್ ಲೀಗ್​​ನ (ಐಪಿಎಲ್ 2025) 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 169 ರನ್ ಕಲೆಹಾಕಿದರೆ, ಗುಜರಾತ್ ಟೈಟಾನ್ಸ್ ತಂಡವು ಈ ಗುರಿಯನ್ನು ಕೇವಲ 17.5 ಓವರ್​ಗಳಲ್ಲಿ ಚೇಸ್ ಮಾಡಿದೆ.

IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗೆದ್ದು ಬೀಗಿರುವ ಗುಜರಾತ್ ಟೈಟಾನ್ಸ್ (GT) ತಂಡದ ಡ್ರೆಸ್ಸಿಂಗ್ ರೂಮ್ ವಿಡಿಯೋ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ಮೆಂಟರ್ ಪಾರ್ಥೀವ್ ಪಟೇಲ್ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಹಾಡಿ ಹೊಗಳಿದರು.

ಅದರಲ್ಲೂ ಸಣ್ಣ ಮೈದಾನದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಪಿನ್ನರ್ ಸಾಯಿ ಕಿಶೋರ್ ಅವರನ್ನು ಇಂಪ್ಯಾಕ್ಟ್ ಆಟಗಾರ ಎಂದು ಬಣ್ಣಿಸಿದರು. ಇನ್ನು ಇಡೀ ಪಂದ್ಯದ ಮೇಲೆ ಪ್ರಭಾವ ಬೀರಿದ ಬ್ಯಾಟರ್ ಆಗಿ ಜೋಸ್ ಬಟ್ಲರ್ ಅವರನ್ನು ಹಾಡಿ ಹೊಗಳಿದರು.

ಇದಾದ ಬಳಿಕ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಪ್ರದರ್ಶನಕ್ಕೆ ಬಹುಪಾರಕ್ ಎಂದ ಪಾರ್ಥೀವ್ ಪಟೇಲ್, 19ನೇ ಓವರ್​ ಎಸೆದ ರೀತಿಯನ್ನು ಹಾಡಿ ಹೊಗಳಿದರು. ಅಲ್ಲದೆ ನಾನು ಮ್ಯಾಚ್ ವಿನ್ನರ್ ಮೊಹಮ್ಮದ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅಂದಹಾಗೆ ನಾನು ಜಸ್ಸಿ ಭಾಝ್ (ಜಸ್​ಪ್ರೀತ್ ಬುಮ್ರಾ) ಅವರನ್ನು ಮಾತ್ರ ನಂಬುತ್ತೇನೆ ಎನ್ನುವುದು ಮೊಹಮ್ಮದ್ ಸಿರಾಜ್ ಅವರ ಟ್ರೇಡ್ ಮಾರ್ಕ್ ಡೈಲಾಗ್. ಇದನ್ನೇ ಈಗ ಪಾರ್ಥೀವ್ ಪಟೇಲ್ ನಾನು ಮ್ಯಾಚ್ ವಿನ್ನರ್ ಮೊಹಮ್ಮದ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ ಎನ್ನುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು  ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 169 ರನ್ ಕಲೆಹಾಕಿದರೆ, ಗುಜರಾತ್ ಟೈಟಾನ್ಸ್ ತಂಡವು ಈ ಗುರಿಯನ್ನು ಕೇವಲ 17.5 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.