‘ಸಾಯೋ ದಿನ ಬೆಳಿಗ್ಗೆಯೂ ಚಂದುಗೆ ಕರೆ ಮಾಡಿದ್ದೆ’; ಪವಿತ್ರಾ ಮಗನ ಹೇಳಿಕೆ
‘ಚಂದು ಅವರು ಶಾಕ್ ಹಾಗೂ ದುಃಖದಲ್ಲಿ ಇದ್ದರು. ಸಾಯೋ ದಿನ ಬೆಳಿಗ್ಗೆಯೂ ನಾನು ಕಾಲ್ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಅಮ್ಮನ ಅಂತ್ಯಕ್ರಿಯೆ ದಿನ ನಮ್ಮ ಜೊತೆಯೇ ಇದ್ದರು. ಹೊರಡುವಾಗ ನಮ್ಮ ಜೊತೆ ಮಾತನಾಡಿದ್ದರು’ ಎಂದಿದ್ದಾರೆ ಪವಿತ್ರಾ ಮಗ ಪ್ರಜ್ವಲ್.
ಕಿರುತೆರೆ ನಟಿ ಪವಿತ್ರಾ ಅವರು ಅಪಘಾತದಲ್ಲಿ ಮೃತಪಟ್ಟರೆ ಅವರ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಎನಿಸಿದೆ. ಪವಿತ್ರಾ ಮಗ ಪ್ರಜ್ವಲ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ಚಂದು (Chandu) ಅವರು ಶಾಕ್ ಹಾಗೂ ದುಃಖದಲ್ಲಿ ಇದ್ದರು. ಸಾಯೋ ದಿನ ಬೆಳಿಗ್ಗೆಯೂ ನಾನು ಕಾಲ್ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಅಮ್ಮನ ಅಂತ್ಯಕ್ರಿಯೆ ದಿನ ನಮ್ಮ ಜೊತೆಯೇ ಇದ್ದರು. ಹೊರಡುವಾಗ ನಮ್ಮ ಜೊತೆ ಮಾತನಾಡಿದರು. ಹೈದರಾಬಾದ್ನಲ್ಲಿ ಯಾರಿಲ್ಲ ಎಂದರು ನಾನಿದ್ದೇನೆ ಎಂದು ಧೈರ್ಯ ತುಂಬಿದ್ದರು. ಎರಡು ಮೂರು ದಿನ ಚೆನ್ನಾಗಿಯೇ ಇದ್ದರು. ಆಸ್ಪತ್ರೆಗೆ ಹೋಗಿದ್ದೀನಿ ಎಂದೆಲ್ಲ ಹೇಳುತ್ತಿದ್ದರು. ಈ ತರ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದಿದ್ದಾರೆ ಪ್ರಜ್ವಲ್. ಚಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಅವರಿಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

