ಕುಮಾರಸ್ವಾಮಿಯವರಿಗೆ ಪೌರುಷ ಇದ್ದರೆ ದಿನಾಲೂ ಹಲ್ಲೆಗೊಳಗಾಗುವ ಕಾಶ್ಮೀರದ ಹಿಂದೂಗಳಿಗೆ ಸಹಾಯ ಮಾಡಲಿ: ಡಾ ಮಳಲಿ
ನಮ್ಮ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು, ಎಲ್ಲ ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅನ್ನುವ ಜನರಿಗೆ ಕುಮಾರಸ್ವಾಮಿಯಂಥ ಜನ ಹೋಗಿ ದುಡ್ಡು ಕೊಟ್ಟು ಬರುತ್ತಾರಲ್ಲ, ಇವರಿಗೆ ನಾಚಿಕೆಯಾಗಬೇಕು ಎಂದು ಮಳಲಿ ಹೇಳುತ್ತಾರೆ.
ಯಾದಗಿರಿ: ಆರ್ ಎಸ್ ಎಸ್ ಮುಖಂಡ ಡಾ ಹಣಮಂತ ಮಳಲಿ (Dr Hanmanth Malali) ಅವರು ವಿವಾದಾತ್ಮಕ (controversial) ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಮಂಗಳವಾರದಂದು ಯಾದಗಿರಿ ಬಳಿ ಹಿಜಾಬ್, ಮುಸಲ್ಮಾನರಿಗೆ ಹಿಂದೂ ದೇವಾಲಯಗಳಲ್ಲಿ ವ್ಯಾಪಾರ ನಡೆಸಲು ನಿಷೇಧ, ಧಾರವಾಡನಲ್ಲಿ ನಬಿ ಸಾಬ್ (Nabi Sab) ಹಣ್ಣಿನ ಅಂಗಡಿಡ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರ ದಾಂಧಲೆ ಮೊದಲಾದ ವಿಷಯಗಳನ್ನು ಎತ್ತಿಕೊಂಡು ಸೌಹಾರ್ದತೆ ಕದಡುವ ಮಾತುಗಳನ್ನಾಡಿದರು. ಧಾರವಾಡದ ಹಣ್ಣಿನ ಅಂಗಡಿ ಮಾಲೀಕ ನಬಿಸಾಬ್ ಅವರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಸ್ತೆಗೆ ಬಿಸಾಡಿ ಹಾಳು ಮಾಡಿದ ಬಳಿಕ ಅವರ ಸಹಾಯಕ್ಕೆ ಮುಂದಾದ ಕೆಲ ಜನರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒಬ್ಬರು. ಜೆಡಿ(ಎಸ್) ನಾಯಕ ನಬಿ ಸಾಬ್ ಅವರಿಗೆ ರೂ.10,000 ಗಳ ಧನಸಹಾಯ ಮಾಡಿದ್ದಾರೆ.
ಕುಮಾರಸ್ವಾಮಿ ಮಾಡಿದ ಸಹಾಯ ಹಣಮಂತ ಮಳಲಿ ಅವರಿಗೆ ತಪ್ಪಾಗಿ ಕಾಣುತ್ತಿದೆ. ಇಲ್ಲಿ ಕಲ್ಲಂಗಡಿ ಒಡೆದರೆ ನೆರವಿಗೆ ಧಾವಿಸಿರುವ ಕುಮಾರಸ್ವಾಮಿ ಅವರು ಕಾಶ್ಮೀರನಲ್ಲಿ ಪ್ರತಿದಿನ ತಲೆ ಒಡೆಸಿಕೊಂಡು ಸಾಯುತ್ತಿರುವ ಹಿಂದೂಗಳಿಗೆ ಹಣ ಸಹಾಯ ಮಾಡಿ ಪೌರುಷ ಮೆರೆಯಲಿ ಅಂತ ಸವಾಲು ಹಾಕಿದ್ದಾರೆ. ಇವರೆಲ್ಲ ಹೀಗೆ ಮಾಡಿದಕ್ಕೆ ಮುಸಲ್ಮಾನರು ತಲೆಯೇರಿ ಕುಳಿತಿದ್ದಾರೆ. ಅವರನ್ನು ಹಾಗೆಯೇ ಬಿಟ್ಟರೆ ಜನಸಂಖ್ಯೆಯಲ್ಲಿ ನಮ್ಮನ್ನು ಮೀರಿಸಿ ರಾಜ್ಯ ನಡೆಸಲಾರಂಭಿಸುತ್ತಾರೆ ಎಂದು ಮಳಲಿ ಹೇಳಿದರು.
ನಮ್ಮ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು, ಎಲ್ಲ ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅನ್ನುವ ಜನರಿಗೆ ಕುಮಾರಸ್ವಾಮಿಯಂಥ ಜನ ಹೋಗಿ ದುಡ್ಡು ಕೊಟ್ಟು ಬರುತ್ತಾರಲ್ಲ, ಇವರಿಗೆ ನಾಚಿಕೆಯಾಗಬೇಕು ಎಂದು ಹೇಳುವ ಮಳಲಿ, ಇನ್ನು ಮುಂದೆ ಇಂಥದೆಲ್ಲ ನಡೆಯುವುದಿಲ್ಲ ಕೇಂದ್ರದಲ್ಲಿ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಪುರುಷತ್ವ ಇರುವವರು ಮಾತ್ರ ಅಧಿಕಾರಕ್ಕೆ ಬರುತ್ತಾರೆ ಅನ್ನುತ್ತಾರೆ.