ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ಜಲಧಾರೆ ಯಾತ್ರೆ ಆರಂಭಿಸುವ ಮೊದಲು ಎಲ್ಲ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡಿದರು!

ಅವರ ಜೊತೆ ಪಕ್ಷದ ಕೆಲ ನಾಯಕರು ಸಹ ಇದ್ದಾರೆ. ಕುಮಾರಸ್ವಾಮಿ ರಾಮನಗರವನ್ನು ತಮ್ಮ ಕರ್ಮಭೂಮಿ ಎಂದು ಭಾವಿಸುವುದರಿಂದ ತಮ್ಮ ಎಲ್ಲ ಹೊಸ ಕಾರ್ಯಗಳನ್ನು ರೇಷ್ಮೆ ನಗರದಿಂದಲೇ ಆರಂಭಿಸುತ್ತಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ಜಲಧಾರೆ ಯಾತ್ರೆ ಆರಂಭಿಸುವ ಮೊದಲು ಎಲ್ಲ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡಿದರು!
ದರ್ಗಾನಲ್ಲಿ ಕುಮಾರಸ್ವಾಮಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2022 | 8:12 PM

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರು ಪಕ್ಷ ಜೆಡಿ(ಎಸ್)ನ ಮಹತ್ವಾಕಾಂಕ್ಷೆಯ ಜನತಾ ಜಲಧಾರೆ ಯಾತ್ರೆ (Janata Jaladhare Yatre) ಮಂಗಳವಾರದಂದು ಶುರುವಾಗಿದೆ. ಯಾತ್ರೆ ಆರಂಭಿಸುವ ಮೊದಲು ಕುಮಾರಸ್ವಾಮಿ ಅವರು ರಾಮನಗರದಲ್ಲಿ (Ramanagara) ದೇವಸ್ಥಾನ ಚರ್ಚ್ ಮತ್ತು ದರ್ಗಾಗೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸಿದರು. ಒಂದು ಯೋಜನೆ ಅಥವಾ ಅಭಿಯಾನ ಅರಂಭಿಸುವ ಮೊದಲು ಅವರು ಎಲ್ಲ ದರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಪರಿಪಾಠ ಪಾಲಿಸುತ್ತಾ ಬಂದಿದ್ದಾರೆ. ಮಂಗಳವಾರದಂದು ಸಹ ಅದನ್ನು ಮಾಡಿದರು. ಈ ವಿಡಿಯೋನಲ್ಲಿ ಅವರು ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದು ಜೆಡಿ(ಎಸ್) ಪಕ್ಷಕ್ಕೆ ವಾಪಸ್ಸು ಬಂದಿರುವ ಹಿರಿಯ ಮುಸ್ಲಿಂ ನಾಯಕ ಸಿ ಎಮ್ ಇಬ್ರಾಹಿಂ ಅವರ ಜೊತೆ ರಾಮನಗರದಲ್ಲಿರುವ ದರ್ಗಾವೊಂದಕ್ಕೆ ಬಂದಿರುವುದನ್ನು ನೀವು ಕಾಣಬಹುದು.

ದರ್ಗಾನಲ್ಲಿ ಕುಮಾರಸ್ವಾಮಿ ಚಾದರ್ ಹೊದೆಸುತ್ತಿರುವುದನ್ನು ಸಹ ನೀವು ನೋಡಬಹುದು. ಅವರ ಜೊತೆ ಪಕ್ಷದ ಕೆಲ ನಾಯಕರು ಸಹ ಇದ್ದಾರೆ. ಕುಮಾರಸ್ವಾಮಿ ರಾಮನಗರವನ್ನು ತಮ್ಮ ಕರ್ಮಭೂಮಿ ಎಂದು ಭಾವಿಸುವುದರಿಂದ ತಮ್ಮ ಎಲ್ಲ ಹೊಸ ಕಾರ್ಯಗಳನ್ನು ರೇಷ್ಮೆ ನಗರದಿಂದಲೇ ಆರಂಭಿಸುತ್ತಾರೆ.

ಮುಸ್ಲಿಂ ಸಮುದಾಯದ ನಡುವೆ ಕುಮಾರ ಸ್ವಾಮಿ ನಿಸ್ಸಂದೇಹವಾಗಿ ಜನಪ್ರಿಯ ನಾಯಕರು ಮಾರಾಯ್ರೇ. ಅವರು ದರ್ಗಾದ ಬಳಿ ಬರೋದು ಗೊತ್ತಾಗುತ್ತಿದ್ದಂತೆಯೇ ಸಾವಿರಾರು ಮುಸಲ್ಮಾನರು ಅಲ್ಲಿಗೆ ದೌಡಾಯಿಸಿದರು. ಅವರೊಂದಿಗೆ ಹಸ್ತಲಾಘವ ಮಾಡಲು ಸೆಲ್ಫೀ ತೆಗೆದುಕೊಳ್ಳಲು ಜನ ಮುಗಿ ಬೀಳುತ್ತಿರುವುದನ್ನು ವಿಡಿಯೋನಲ್ಲಿ ಕಾಣಬಹುದು.

ಇದನ್ನೂ ಓದಿ:  JDS: ಜನತಾ ಜಲಧಾರೆ -ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳನ್ನು ಬೀಳ್ಕೊಟ್ಟ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ