ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ನಾನು ಹೇಳಿದ್ದು, ಸಮುದಾಯದ ಪ್ರಸ್ತಾಪ ಮಾಡಿಲ್ಲ: ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ

|

Updated on: Jun 29, 2024 | 1:11 PM

ಒಕ್ಕಲಿಗ ಸಮುದಾಯದ ಪ್ರಸ್ತಾಪವನ್ನು ತಾವು ಮಾಡಿಲ್ಲ, ಮುಖ್ಯಮಂತ್ರಿಯನ್ನು ಮಾಡಬೇಕಿರುವುದು ಸಮುದಾಯವಲ್ಲ, ಶಾಸಕರು ಮತ್ತು ಹೈಕಮಾಂಡ್ ಆ ಕೆಲಸವನ್ನು ಮಾಡುತ್ತಾರೆ. ಶಿವಕುಮಾರ್ ಸಿಎಂ ಆಗಬೇಕೆಂದು ಸಮುದಾಯದ ಹಿನ್ನೆಲೆಯಲ್ಲಿ ಹೇಳಿಲ್ಲ, ಚುನಾವಣೆಯಲ್ಲಿ ಶಿವಕುಮಾರ್ ಪಟ್ಟಿರುವ ಶ್ರಮವನ್ನು ನೋಡಿ ಅವರು ಸಿಎಂ ಆಗಬೇಕೆಂದು ಹೇಳಿದ್ದೇನೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಬೇಕೆನ್ನುವ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ. ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು, ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡಲ ಗಡುವು ನೀಡಲು ನಾನು ಯಾರೂ ಅಲ್ಲ, ಚುನಾವಣೆಯಲ್ಲಿ ಶಿವಕುಮಾರ್ ಸಹ ಕಷ್ಟಪಟ್ಟಿದ್ದಾರೆ ಎಂಬ ಅಂಶವನ್ನು ಅವರು ಮನವರಿಕೆ ಮಾಡಿಕೊಂಡು ಅವರಾಗೇ ಸ್ಥಾನ ಬಿಟ್ಟುಕೊಟ್ಟರೆ ಚೆನ್ನಾಗಿರುತ್ತದೆ ಎಂದು ಸ್ವಾಮೀಜಿ ಹೇಳಿದರು. ಸ್ವಾಮೀಜೀ ಒಕ್ಕಲಿಗ ಮಹಾಸಂಸ್ಥಾನ ಮಠದ ಬಗ್ಗೆ ಹೆಚ್ ಡಿ ರೇವಣ್ಣ ಅವರು ಮಾತಾಡಿದ್ದು ಅಪ್ರಸ್ತುತ, ತಾವು ಹೇಳಿದ್ದು ಕೇವಲ ಶಿವಕುಮಾರ್ ಮುಖ್ಯಮಂತ್ರಯಾಗಬೇಕೆನ್ನುವ ಒಂದೇ ಅಂಶ, ಮಠ, ಸಮುದಾಯಗಳ ಬಗ್ಗೆ ತಾವು ಪ್ರಸ್ತಾಪವೇ ಮಾಡಿಲ್ಲ ಎಂದು ಸ್ವಾಮೀಜಿ ಹೇಳಿದರು. 1982ರಿಂದ ತಾವು ಮಠದಲ್ಲಿರುವುದಾಗಿ ಹೇಳಿದ ಸ್ವಾಮೀಜಿ ದೇವೇಗೌಡರ ಬಗ್ಗೆ ತಮಗೆ ಅಪಾರ ಗೌರವವಿದೆ, ಅನಾರೋಗ್ಯದ ನಿಮಿತ್ತ ಅವರ ಪರ ಮಾತಾಡುವುದು ಸಾಧ್ಯವಾಗಿರಲಿಲ್ಲ ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯ ವಿಭಜನೆಯಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ: ಚಂದ್ರಶೇಖರ ಶ್ರೀ ಅಚ್ಚರಿಯ ಹೇಳಿಕೆ