ಬಸವರಾಜ ರಾಯರೆಡ್ಡಿ ಯಾಕೆ ಅಸಮಾಧಾನಗೊಂಡಿದ್ದಾರೆ ಗೊತ್ತಿಲ್ಲ, ನಾನವರ ಬಾತ್ಮೀದಾರ ಅಲ್ಲ: ಬಿಕೆ ಹರಿಪ್ರಸಾದ್, ವಿಪ ಸದಸ್ಯ
ರಾಯರೆಡ್ಡಿ ಎನ್ ಎಸ್ ಯು ಐ ಪ್ರಾಡಕ್ಟ್, 80ರ ದಶಕದ ಆರಂಭದಲ್ಲೇ ಕಾಂಗ್ರೆಸ ಪಕ್ಷದಲ್ಲಿ ಗುರುತಿಸಿಕೊಂಡವರು, ಆಮೇಲೆ ಜನತಾ ಪರಿವಾರ ಸೇರಿ, ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದವರು, ಆದರೆ ಮೂಲ ಕಾಂಗ್ರೆಸ್ ಪಕ್ಷ ಎಂದು ಹೇಳಿದರು
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕಾಂಗ್ರೆಸ್ ಪಕ್ಷದ ಎಮ್ ಎಲ್ ಸಿ ಬಿಕೆ ಹರಿಪ್ರಸಾದ್ (BK Hari Prasad) ದೆಹಲಿಯಲ್ಲಿ ನಿನ್ನೆ ನಡೆದ ಮೀಟಿಂಗ್ ಬಗ್ಗೆ ಬೇರೆ ನಾಯಕರು ಹೇಳಿದ ಮಾತುಗಳನ್ನೇ ಹೇಳಿದರು. ಲೋಕಸಭಾ ಚುನಾವಣೆಗೆ ಈಗಿಂದ್ಲೇ ತಯಾರಿ ನಡೆಸಬೇಕು ಹೆಚ್ಚು ಸೀಟುಗಳನ್ನು ಗೆಲ್ಲುವ ಪ್ರಯತ್ನವಾಗಬೇಕು ಅಂತ ದೆಹಲಿಗೆ ಹೋಗಿ ಬಂದ ನಾಯಕರು ಹೇಳುತ್ತಿರುವಂತೆ ಹರಿಪ್ರಸಾದ ಸಹ ಅದನ್ನೇ ಹೇಳಿದರು. ಪ್ರರ್ತಕರೊಬ್ಬರು ಅಸಮಾಧಾನಿತ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ಎನ್ ಎಸ್ ಯು ಐ (NSUI) ಪ್ರಾಡಕ್ಟ್, 80ರ ದಶಕದ ಆರಂಭದಲ್ಲೇ ಕಾಂಗ್ರೆಸ ಪಕ್ಷದಲ್ಲಿ ಗುರುತಿಸಿಕೊಂಡವರು, ಆಮೇಲೆ ಜನತಾ ಪರಿವಾರ ಸೇರಿ, ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದವರು, ಆದರೆ ಮೂಲ ಕಾಂಗ್ರೆಸ್ ಪಕ್ಷ ಎಂದು ಹೇಳಿದರು. ಅವರು ಅಸಮಾಧಾನಗೊಂಡಿದದ್ದು ಯಾಕೆ ಅಂತ ಕೇಳಿದ ಪ್ರಶ್ನೆಗೆ ಅವರು, ಹೇಗೆ ಗೊತ್ತಾಗಬೇಕು, ತಾನೇನೂ ಅವರ ಬಾತ್ಮೀದಾರ ಅಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ