ನಾನಿನ್ನೂ ಮಾತು ನಿಲ್ಲಿಸಿಲ್ಲ… ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ ಡಿಸಿಎಂ ಶಾಕ್​

|

Updated on: Sep 24, 2024 | 6:12 PM

ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ವಿಚಾರವನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ಅದರ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಇನ್ನೂ ಮಾತು ನಿಲ್ಲಿಸಿಲ್ಲ ಎಂದು ಸಡನ್ ಆಗಿ ಸಿಟ್ಟಾದ ಸಿದ್ರಾಮಯ್ಯರನ್ನು ನೋಡಿ ಡಿಸಿಎಂ ಶಾಕ್​ ಆಗಿದ್ದಾರೆ.

ಬೆಂಗಳೂರು, ಸೆ.24: ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ವಿಚಾರವನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ಅದರ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ, ಪಶುಭಾಗ್ಯ ಬಗ್ಗೆ ಎಲ್ಲದಕ್ಕೂ ವಿರೋಧ ಮಾಡಿದರು. ಅವರು ಸಾಮಾಜಿಕ ನ್ಯಾಯಕ್ಕೆ, ಬಡವರಿಗೆ ವಿರೋಧವಾಗಿ ಆಗಿದ್ದಾರೆ. ಹೇಗಾದರೂ ಮಾಡಿ ಸರ್ಕಾರಕ್ಕೆ ಮಸಿ ಬಳೆಯಬೇಕೆಂದಿದ್ದಾರೆ. ಇನ್ನು ನಾನು ಕೋರ್ಟ್​ ನೀಡಿದ ತೀರ್ಪನ್ನು ಓದಿದ ಬಳಿಕ ಹೆಚ್ಚಾಗಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಈ ವೇಳೆ ನಾನು ಇನ್ನೂ ಮಾತು ನಿಲ್ಲಿಸಿಲ್ಲ ಎಂದು ಸಿದ್ರಾಮಯ್ಯ ಅವರು ಸಡನ್ ಸಿಟ್ಟಾದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 24, 2024 06:10 PM