Loading video

ಸೆಲಿಬ್ರಿಟಿ ಸ್ಟೇಟಸ್ ಬಗ್ಗೆ ಹೆಚ್ಚು ಯೋಚಿಸಲ್ಲ, ಅದು ಬದುಕಿನ ಒಂದು ಭಾಗ ಮಾತ್ರ: ಸೂರ್ಯ ಕುಮಾರ್ ಯಾದವ್, ಕ್ರಿಕೆಟಿಗ

Updated on: Jul 09, 2024 | 3:38 PM

ಐಸಿಸಿ ಟಿ20ಐ ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅಮೋಘ ಕ್ಯಾಚ್ ಈಗ ಮನೆ ಮಾತಾಗಿದೆ. ಅದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸೂರ್ಯ ಕ್ಯಾಚ್ ಹಿಡಿಯುವಾಗ ಬೌಂಟರಿ ಗೆರೆ ಮುಟ್ಟಿದರು ಅಂತ ವಿವಾದ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಸೂರ್ಯ, ಅವರೆಲ್ಲ ಯಾಕೆ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ, ಆದರೆ ನಾನಂತೂ ಗೆರೆ ಮುಟ್ಟಲಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಉಡುಪಿ: ಸೂರ್ಯ ಕುಮಾರ್ ಯಾದವ್ ಅವರನ್ನು 360 ಡಿಗ್ರಿ ಕ್ರಿಕೆಟರ್ ಅಂತಲೂ ಕರಯುವುದುಂಟು. ಅದರೆ ಈ ಡೌನ್ ಟು ಅರ್ಥ್ ಕ್ರಿಕೆಟರ್ ಅಂಥ ಕೀರ್ತಿ ಕೇವಲ ಎಬಿ ಡಿವಿಲಿಯರ್ಸ್ ಗೆ ಮಾತ್ರ ಸಲ್ಲುತ್ತದೆ, ತಾನೊಬ್ಬ ಸಾಮಾನ್ಯ ಕ್ರಿಕೆಟಿಗ ಅನ್ನುತ್ತಾರೆ. ಪತ್ನಿ ದಿವೀಶಾ ಶೆಟ್ಟಿ ಜೊತೆ ಅವರು ಇಂದು ಉಡುಪಿಗೆ ಹತ್ತಿರದ ಕಾಪುನಲ್ಲಿ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ನಂತರ ಉಡುಪಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೂರ್ಯ ಮನಬಿಚ್ಚಿ ಮಾತಾಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮನಸ್ಸು ಪ್ರಶಾಂತವಾಗಿದೆ, ಸುಮಾರು 5 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ ಇದು ಎರಡನೇ ಭೇಟಿ ಎಂದು ಸೂರ್ಯ ಹೇಳಿದರು. ಸೆಲಿಬ್ರಿಟಿ ಸ್ಟೇಟಸ್ ಬಗ್ಗೆ ತಾನು ಹೆಚ್ಚು ಯೋಚಿಸಲ್ಲ ಮತ್ತು ಅದನ್ನು ತಲೆಗೂ ಏರಿಸಿಕೊಳ್ಳಲ್ಲ, ಯಾಕೆಂದರೆ ಅದು ಬದುಕಿನ ಒಂದು ಭಾಗ ಮಾತ್ರ, ಅದು ಮುಗಿದ ಬಳಿಕ ನಾವು ಶ್ರೀಸಾಮಾನ್ಯನಾಗುತ್ತೇವೆ ಎಂದು ಸೂರ್ಯ ಹೇಳಿದರು. ಭಾರತ ಟಿ20ಐ ವಿಶ್ವಕಪ್ ಗೆದ್ದ ಬಳಿಕ ಬದುಕಿನಲ್ಲಿ ಯಾವತ್ತೂ ಕಟ್ ಮಾಡದಷ್ಟು ಕೇಕ್ ಗಳನ್ನು ಕಟ್ ಮಾಡಿದೆ, ತಮ್ಮ ಮದುವೆಯ ವಾರ್ಷಿಕೋತ್ಸವ ಸಹ ಅವತ್ತೇ ಇದ್ದ ಕಾರಣ ಕೇಕ್ ಕತ್ತರಿಸುವ ಕೆಲಸ ದುಪ್ಪಟ್ಟುಗೊಂಡಿತ್ತು ಎಂದು ಅವರು ನಗುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   T20 World Cup: ಶ್ರೇಯಸ್ ಅಯ್ಯರ್​ಗಿಂತ ಸೂರ್ಯ ಕುಮಾರ್ ಯಾದವ್ ಬೆಸ್ಟ್; ಗೌತಮ್ ಗಂಭೀರ್

Published on: Jul 09, 2024 03:31 PM