T20 World Cup: ಶ್ರೇಯಸ್ ಅಯ್ಯರ್​ಗಿಂತ ಸೂರ್ಯ ಕುಮಾರ್ ಯಾದವ್ ಬೆಸ್ಟ್; ಗೌತಮ್ ಗಂಭೀರ್

T20 World Cup: ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಅನ್ನು ಹೊಗಳುತ್ತಲೇ ಗಂಭೀರ್, ಸೂರ್ಯಕುಮಾರ್, ಅಯ್ಯರ್​ಗಿಂತ ಭಿನ್ನ ವರ್ಗದ ಆಟಗಾರ. ಅವರು ಬಹುಮುಖ ಪ್ರತಿಭೆ. ಜೊತೆಗೆ ಆತ ತುಂಬಾ ಅಸಾಂಪ್ರದಾಯಿಕ ಆಟಗಾರ.

T20 World Cup: ಶ್ರೇಯಸ್ ಅಯ್ಯರ್​ಗಿಂತ ಸೂರ್ಯ ಕುಮಾರ್ ಯಾದವ್ ಬೆಸ್ಟ್; ಗೌತಮ್ ಗಂಭೀರ್
ಗೌತಮ್ ಗಂಭೀರ್
Follow us
| Updated By: ಪೃಥ್ವಿಶಂಕರ

Updated on: Sep 10, 2021 | 7:02 PM

ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್‌ಗಾಗಿ ಬಿಸಿಸಿಐ ಬುಧವಾರ ತಂಡವನ್ನು ಪ್ರಕಟಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಮತ್ತು ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇಬ್ಬರೂ ಆಟಗಾರರು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ತುಂಬಾ ಅನುಭವ ಹೊಂದಿಲ್ಲ. ಆದರೆ ಇದರ ಹೊರತಾಗಿಯೂ ಆಯ್ಕೆಗಾರರು ಅವರಲ್ಲಿ ತಮ್ಮ ನಂಬಿಕೆಯನ್ನು ತೋರಿಸಿದ್ದಾರೆ.

ಸೂರ್ಯ ಕುಮಾರ್ ಆಯ್ಕೆಯೊಂದಿಗೆ, ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಅಯ್ಯರ್ ಗಾಯಗೊಳ್ಳುವ ಮುನ್ನ ಸೀಮಿತ ಓವರ್ ತಂಡದ ನಿಯಮಿತ ಭಾಗವಾಗಿದ್ದರು. ಅನೇಕ ಅಭಿಮಾನಿಗಳು ಮತ್ತು ಅನುಭವಿಗಳು ಅಯ್ಯರ್ ಅವರ ಅನುಭವಕ್ಕೆ ಸೂರ್ಯ ಕುಮಾರ್ ಯಾದವ್ ಅವರಿಗಿಂತ ಆದ್ಯತೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮಾಜಿ ಆರಂಭಿಕ ಗೌತಮ್ ಗಂಭೀರ್ ಬಿಸಿಸಿಐ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಆಯ್ಕೆ ಬೆಸ್ಟ್; ಗಂಭೀರ್ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಅನ್ನು ಹೊಗಳುತ್ತಲೇ ಗಂಭೀರ್, ಸೂರ್ಯಕುಮಾರ್, ಅಯ್ಯರ್​ಗಿಂತ ಭಿನ್ನ ವರ್ಗದ ಆಟಗಾರ. ಅವರು ಬಹುಮುಖ ಪ್ರತಿಭೆ. ಜೊತೆಗೆ ಆತ ತುಂಬಾ ಅಸಾಂಪ್ರದಾಯಿಕ ಆಟಗಾರ. ಟಿ 20 ಕ್ರಿಕೆಟ್​ನಲ್ಲಿ ನಿಮಗೆ ಅಸಾಂಪ್ರದಾಯಿಕ ವ್ಯಕ್ತಿಗಳು ಬೇಕು. ಸೂರ್ಯಕುಮಾರ್ ಎಲ್ಲಾ ಹೊಡೆತಗಳನ್ನು ಹೊಂದಿದ್ದಾರೆ, ವಿಶೇಷವಾಗಿ ನಂ. 4 ರಲ್ಲಿ. ಏಕೆಂದರೆ ಟಿ -20 ಕ್ರಿಕೆಟ್ ನಲ್ಲಿ ಬ್ಯಾಟ್ ಮಾಡಲು ನಂ .4 ಕೆಲವೊಮ್ಮೆ ಅತ್ಯಂತ ಕಠಿಣವಾದ ಸ್ಥಳವಾಗಿದೆ.

ಅಶ್ವಿನ್ ಆಯ್ಕೆಯಿಂದ ಗಂಭೀರ್ ಖುಷಿಯಾಗಿದ್ದಾರೆ ಇದಕ್ಕೂ ಮುನ್ನ ಗಂಭೀರ್ ಕೂಡ ಅನುಭವಿ ಬೌಲರ್ ಆರ್ ಅಶ್ವಿನ್ ಆಯ್ಕೆಯನ್ನು ಶ್ಲಾಘಿಸಿದ್ದರು. ಗುರುವಾರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಬ್ಲೂಸ್ ಪ್ರದರ್ಶನದಲ್ಲಿ ಗಂಭೀರ್, ಅಶ್ವಿನ್‌ ಆಯ್ಕೆಯಿಂದ ತುಂಬಾ ಸಂತೋಷವಾಗಿದೆ. ಅವರು ವೈಟ್ ಬಾಲ್ ಕ್ರಿಕೆಟ್ ನಿಂದ ಹೊರಬರಬಾರದಿತ್ತು, ಆದರೆ ಈಗ ಅವರು ಹಿಂತಿರುಗಿದ್ದಾರೆ. ನಾವು ಆಯ್ಕೆಗಾರರಿಗೆ ಕ್ರೆಡಿಟ್ ನೀಡಬೇಕು, ಅವರ ಆಗಮನವು ತಂಡವನ್ನು ಬಲಪಡಿಸುತ್ತದೆ. ಅಶ್ವಿನ್ ಹೊಸ ಚೆಂಡಿನ ಜೊತೆಗೆ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ ಮಾಡಬಹುದು. ನೀವು ಅವರನ್ನು ಡೆತ್​ ಓವರ್​ಗಳಲ್ಲೂ ಬೌಲ್ ಮಾಡಿಸಬಹುದು ಎಂದಿದ್ದಾರೆ.

ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ