ಮತದಾನಕ್ಕೆ ಕೇವಲ 3-ದಿನ ಪೆನ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದ್ದರ ಹಿಂದೆ ಕುತಂತ್ರ ಸ್ಪಷ್ಟವಾಗಿದೆ: ಹೆಚ್ ಡಿ ಕುಮಾರಸ್ವಾಮಿ

|

Updated on: Apr 29, 2024 | 1:03 PM

ಸರ್ಕಾರ ಎಸ್ ಐಟಿ ಯನ್ನು ರಚನೆ ಮಾಡಿದೆ, ತನಿಖೆ ನಡೆಯಲಿ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಿ ಎಂದು ಕುಮಾರಸ್ವಾಮಿ ಹೇಳಿದರು. ಪ್ರಜ್ವಲ್ ಈಗ ಎಲ್ಲಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಸಿಡುಕಿದ ಕುಮಾರಸ್ವಾಮಿ, ಅದು ತನಗೆ ಹೇಗೆ ಗೊತ್ತಾಗುತ್ತದೆ ಎಂದರು. ಪ್ರಜ್ವಲ್ ತಪ್ಪಿತಸ್ಥರಾಗಿದ್ದರೆ ಪಕ್ಷ ಸಹ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ: ನಗರಕ್ಕೆ ಇಂದು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghvendra) ಅವರ ಪರವಾಗಿ ಪ್ರಚಾರ ಮಾಡಲು ಆಗಮಿಸಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಮಹಿಳೆಯರ ವಿರುದ್ಧ ಲೈಂಗಿಕ ಶೋಷಣೆ ನಡೆಸಿರುವ ಆರೋಪಕ್ಕೆ ಗುರಿಯಾಗಿ ತಲೆಮರೆಸಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಉತ್ತಮ ಲೀಡ್ ನೊಂದಿಗೆ ಗೆಲ್ಲುತ್ತಾರೆಂದು ಹೇಳಿದರು. ಮಾಧ್ಯಮ ಪ್ರತಿನಿಧಿಗಳು ಪ್ರಜ್ವಲ್ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ಕೇಳಿದಾಗ, ಮತದಾನಕ್ಕೆ ಕೇವಲ ಮೂರು ದಿನ ಬಾಕಿಯಿರುವಾಗ ಪೆನ್ ಡ್ತೈವ್ ಗಳನ್ನು ಬಿಡುಗಡೆ ಮಾಡಿರುವ ಹಿಂದೆ ಕುತಂತ್ರ ಕಾಣಿಸುತ್ತಿದೆ, ಅವುಗಳನ್ನು ಬಿಡುಗಡೆ ಮಾಡಿದ್ದು ಯಾರು? ಬಿಡಯಗಡೆ ಮಾಡುವುದೇ ಅವರ ಉದ್ದೇಶವಾಗಿದ್ದರೆ ಮೊದಲ್ಯಾಕೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಸರ್ಕಾರ ಎಸ್ ಐಟಿ ಯನ್ನು ರಚನೆ ಮಾಡಿದೆ, ತನಿಖೆ ನಡೆಯಲಿ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಿ ಎಂದು ಕುಮಾರಸ್ವಾಮಿ ಹೇಳಿದರು. ಪ್ರಜ್ವಲ್ ಈಗ ಎಲ್ಲಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಸಿಡುಕಿದ ಕುಮಾರಸ್ವಾಮಿ, ಅದು ತನಗೆ ಹೇಗೆ ಗೊತ್ತಾಗುತ್ತದೆ ಎಂದರು. ಪ್ರಜ್ವಲ್ ತಪ್ಪಿತಸ್ಥರಾಗಿದ್ದರೆ ಪಕ್ಷ ಸಹ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಕಾಂಗ್ರೆಸ್ ನಾಯಕರಿಂದ ಗಿಫ್ಟ್ ಕಾರ್ಡ್​​ ಹಂಚಿ ಮತದಾರರಿಗೆ ಆಮಿಷ: ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ

Follow us on