ಕಾಂಗ್ರೆಸ್ ಸರ್ಕಾರ 5-ವರ್ಷದಲ್ಲಿ ಸೃಷ್ಟಿಸಿದ್ದ ಆರ್ಥಿಕ ಅಶಿಸ್ತನ್ನು ಕೇವಲ 14-ತಿಂಗಳ ಅವಧಿಯಲ್ಲಿ ಸ್ಟ್ರೀಮ್ಲೈನ್ ಮಾಡಿದ್ದೆ: ಹೆಚ್ ಡಿ ಕುಮಾರಸ್ವಾಮಿ
ಕಳೆದ ಆರ್ಥಿಕ ವರ್ಷದಲ್ಲಿ 40,000 ಕೋಟಿ ರೂ. ಗಳಷ್ಟು ಹೆಚ್ಚುವರಿ ತೆರಿಗೆ ಹಣ ಸಂಗ್ರವಾಗಿದೆ ಮತ್ತು ಸಿದ್ದರಾಮಯ್ಯ ಸರ್ಕಾರ 86,000 ಕೋಟಿ ರೂ, ಸಾಲವನ್ನೂ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು,
ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಂತೆಯೇ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರದ ಮೇಲೆ ದಾಳಿ ಆರಂಭಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ (development works) ಹಣ ಇಲ್ಲ ಎಂದು ಸರ್ಕಾರ ಹೇಳುತ್ತಿರೋದು ಒಂದು ಡ್ರಾಮಾ ಅಷ್ಟೇ, ಹಣಕ್ಕೇನೂ ಕೊರತೆಯಿಲ್ಲ, ಕಳೆದ ಆರ್ಥಿಕ ವರ್ಷದಲ್ಲಿ 40,000 ಕೋಟಿ ರೂ. ಗಳಷ್ಟು ಹೆಚ್ಚುವರಿ ತೆರಿಗೆ ಹಣ ಸಂಗ್ರವಾಗಿದೆ ಮತ್ತು ಸರ್ಕಾರ 86,000 ಕೋಟಿ ರೂ, ಸಾಲವನ್ನೂ ಮಾಡಿದೆ, ಅಷ್ಟಾಗಿಯೂ 12,000 ಕೋಟಿ ರೂ.ಗಳ ಕೊರತೆ ಬಜೆಟ್ ಅನ್ನು ಸಿದ್ದರಾಮಯ್ಯ (Siddaramaiah) ಮಂಡಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಬೊಕ್ಕಸದಲ್ಲಿ ದುಡ್ಡಿನ ಕೊರತೆ ಇಲ್ಲ, ಇಚ್ಛಾಶಕ್ತಿಯ ಕೊರತೆಯಿದೆ ಎಂದ ಅವರು, ತಾನು ಮುಖ್ಯಮಂತ್ರಿಯಾಗಿದ್ದಾಗ, ಹಿಂದಿನ ಕಾಂಗ್ರೆಸ್ ಸರ್ಕಾರ 5 ವರ್ಷಗಳಲ್ಲಿ ಸೃಷ್ಟಿಸಿದ್ದ ಆರ್ಥಿಕ ಅಶಿಸ್ತನ್ನು ಕೇವ 14 ತಿಂಗಳು ಅವಧಿಯಲ್ಲಿ ಸ್ಟ್ರೀಮ್ ಲೈನ್ ಮಾಡಿದ್ದರೂ ಕಾಂಗ್ರೆಸ್ ನಾಯಕರು ತನ್ನ ಪ್ರಯತ್ನಗಳಿಗೆ ಯಾವತ್ತೂ ಕೃತಜ್ಞತೆ ಸಲ್ಲಿಸಲಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ