ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲವಾದ್ದರಿಂದ ನಿರಾಸೆಯಾಗಿಲ್ಲ, ಚಿಕ್ಕಬಳ್ಳಾಪುರ ಬಿಟಟುಹೋಗಲು ಕಷ್ಟವಾಗುತ್ತಿದೆ: ವೀರಪ್ಪ ಮೊಯ್ಲಿ
ಟಿಕೆಟ್ ಸಿಕ್ಕಿಲ್ಲ ಅಂತ ತಮ್ಮ ಬೆಂಬಲಿಗರು ಬೇಸರ ಮಾಡಿಕೊಳ್ಳಬಾರದು, ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಯುವನಾಯಕ ರಕ್ಷಾರಾಮಯ್ಯ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮೊಯ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ಸ್ಥಾನಮಾನ ಸಿಗುವ ಬಗ್ಗೆಯೂ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ, ಪಕ್ಷ ಈ ಮೊದಲು ಸಾಕಷ್ಟು ಸ್ಥಾನಮಾನ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ (Veerappa Moily) ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಮತ್ತು ಇದನ್ನು ನಿರೀಕ್ಷಿಸಲಾಗಿತ್ತು. ಅವರಿಗೀಗ 84ರ ಇಳಿ ಪ್ರಾಯ ಮತ್ತು ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ 90ರ ಹೊಸ್ತಿಲಲ್ಲಿರುತ್ತಾರೆ. ನಗರದಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ತಮ್ಮ ಮುಂದಿನ ರಾಜಕೀಯ ಬದುಕಿ ಬಗ್ಗೆ ಮುಕ್ತವಾಗಿ ಮಾತಾಡಿರುವ ಮೊಯ್ಲಿ ಅವರು, ತಾನು ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ (aspirant), ಪಕ್ಷದ ಹೈಕಮಾಂಡ್ ಗೆ ಅದನ್ನು ಸ್ಪಷ್ಟಪಡಿಸಿದ್ದೆ, ನಿರಾಸೆಯಾಗುವ (disappointed) ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಿದರು. ಚಿಕ್ಕಬಳ್ಳಾಪರದಿಂದ ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವನಾಗಿಯೂ ಕ್ಷೇತ್ರದ ಸಲುವಾಗಿ ದುಡಿದ ಕಾರಣ ಇದನ್ನು ಬಿಟ್ಟುಹೋಗಲು ಕಷ್ಟವಾಗುತ್ತಿದೆ ಎಂದು ಮೊಯ್ಲಿ ಹೇಳಿದರು. ಟಿಕೆಟ್ ಸಿಕ್ಕಿಲ್ಲ ಅಂತ ತಮ್ಮ ಬೆಂಬಲಿಗರು ಬೇಸರ ಮಾಡಿಕೊಳ್ಳಬಾರದು, ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಯುವನಾಯಕ ರಕ್ಷಾರಾಮಯ್ಯ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮೊಯ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ಸ್ಥಾನಮಾನ ಸಿಗುವ ಬಗ್ಗೆಯೂ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ, ಪಕ್ಷ ಈ ಮೊದಲು ಸಾಕಷ್ಟು ಸ್ಥಾನಮಾನ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೋದಿ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿಗೆ ತಿವಿದ ಲೆಹರ್ ಸಿಂಗ್