AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿಗೆ ತಿವಿದ ಲೆಹರ್‌ ಸಿಂಗ್‌

ಅಯೊಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಾಲ ಉಪವಾಸ ವ್ರತದಲ್ಲಿದ್ದರು. ಆದ್ರೆ, ಇದಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ. ಅಲ್ಲದೇ ಮೋದಿ ಉಪವಾಸ ಮಾಡಿದ್ದೇ ಅನುಮಾನ ಎಂದಿದ್ದರು. ಈ ಸುದ್ದಿಯನ್ನು ಟಿವಿ9ನಲ್ಲಿ ನೋಡಿ ಬಿಜೆಪಿ ಸಂಸದ ಲೇಹರ್ ಸಿಂಗ್, ಮೊಯ್ಲಿಗೆ ತಿರುಗೇಟು ಕೊಟ್ಟಿದ್ದಾರೆ.

ಮೋದಿ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿಗೆ ತಿವಿದ ಲೆಹರ್‌ ಸಿಂಗ್‌
ವೀರಪ್ಪ ಮೊಯ್ಲಿ-ಲೇಹರ್ ಸಿಂಗ್
TV9 Web
| Edited By: |

Updated on:Jan 23, 2024 | 5:28 PM

Share

ಬೆಂಗಳೂರು, (ಜನವರಿ 23): ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಉಪವಾಸ ವ್ರತ ಬಗ್ಗೆ ಟೀಕೆ ಮಾಡಿದ ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿಗೆ (veerappa moily) ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯ(Lehar Singh Siroya)  ತಿರುಗೇಟು ನೀಡಿದ್ದಾರೆ. ಟಿವಿ9ನ ಸುದ್ದಿ ನೋಡಿ ಟ್ವೀಟ್ ಮಾಡಿರುವ ಲಹರ್‌ ಸಿಂಗ್, ಮಹಾನ್‌ ಸಾಹಿತಿಯಂತೆ ವೇಷ ಧರಿಸಿರುವ ವೀರಪ್ಪ ಮೊಯ್ಲಿಯವರು ಎಲ್ಲರೂ ತಮ್ಮಂತೆ ಸುಳ್ಳುಗಾರರು ಅಂದುಕೊಂಡಿದ್ದಾರೆ. ಶ್ರೀರಾಮನಲ್ಲಿ ನಂಬಿಕೆ ಇದ್ದರೆ ಮಾತ್ರ ನೀವು ಉಪವಾಸ ಮಾಡಿ ಬದುಕಬಹುದೇ ಹೊರತು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಯತ್ನಿಸಿದರೆ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಮಹಾನ್‌ ಸಾಹಿತಿಯಂತೆ ವೇಷ ಧರಿಸಿರುವ ವೀರಪ್ಪ ಮೊಯ್ಲಿಯವರು ಎಲ್ಲರೂ ತಮ್ಮಂತೆ ಸುಳ್ಳುಗಾರರು ಅಂದುಕೊಂಡಿದ್ದಾರೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದ ಉಪವಾಸವನ್ನು ಮೊಯ್ಲಿ ಅನುಮಾನದಿಂದ ನೋಡಿದ್ದಾರೆ. ಸತ್ಯ ಏನೆಂದು ದೇಶಕ್ಕೆ ತಿಳಿದಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಲೇಹರ್ ಸಿಂಗ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮೋದಿ ವ್ರತದ ಮೇಲೆ ಮಾಜಿ ಸಿಎಂ ಅನುಮಾನ

ಶ್ರೀರಾಮನಲ್ಲಿ ನಂಬಿಕೆ ಇದ್ದರೆ ಮಾತ್ರ ನೀವು ಉಪವಾಸ ಮಾಡಿ ಬದುಕಬಹುದೇ ಹೊರತು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಯತ್ನಿಸಿದರೆ ಅಲ್ಲ. ಗಾಂಧಿ ಕುಟುಂಬವನ್ನು ಮೆಚ್ಚಿಸಲು ಇಷ್ಟೆಲ್ಲ ಪ್ರಯತ್ನಿಸಿದ ಬಳಿಕವೂ ಮೊಯ್ಲಿ ಅವರಿಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವುದಿಲ್ಲ ವ್ಯಂಗ್ಯವಾಡಿದ್ದಾರೆ.

ಅಷ್ಟಕ್ಕೂ ವೀರಪ್ಪ ಮೊಯ್ಲಿ ಹೇಳಿದ್ದೇನು?

ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ‌ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ. ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದ್ರು. ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣಲಿಲ್ಲ. ದೇವರಿಗೆ ಇಚ್ಛೆ ಪ್ರಕಾರ ಏನು ಬೇಕಾದರೂ ಮಾಡಲಿ. ಅದ್ರೆ ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಎಂದಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Tue, 23 January 24