‘ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ’; ಅಭಿಮಾನಿ ಶಪಥ
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದೆ. ಕೆಲವರು ದರ್ಶನ್ ಅವರ ಖೈದಿ ಸಂಖ್ಯೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈಗ ಅಭಿಮಾನಿಯೋರ್ವ ಚಪ್ಪಲಿಯನ್ನೇ ತೊರೆದಿದ್ದಾರೆ.
ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ಈ ಮಧ್ಯೆ ಅಭಿಮಾನಿಗಳ ಕ್ರೇಜ್ ಮುಂದುವರಿದಿದೆ. ಕೆಲವರು ದರ್ಶನ್ ಅವರ ಖೈದಿ ಸಂಖ್ಯೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಮಗುವಿಗೆ ಖೈದಿ ಸಂಖ್ಯೆ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈಗ ಮೈಸೂರಿನ ದರ್ಶನ್ ಅಭಿಮಾನಿ ಧನುಷ್ ಶಪಥ ಒಂದನ್ನು ಮಾಡಿದ್ದಾರೆ. ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದಿದ್ದಾರೆ. ದರ್ಶನ್‌ಗಾಗಿ ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಹೊತ್ತಿದ್ದು, ಮುಡಿ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.