ಮೆಂಟಲ್ ಗಿರಾಕಿ ಮುನಿಸ್ವಾಮಿಯನ್ನು ಸೋಲಿಸಲು ಕೋಲಾರದಲ್ಲೂ ಓಡಾಡುತ್ತೇನೆ: ಪ್ರದೀಪ್ ಈಶ್ವರ್, ಶಾಸಕ

Updated on: Oct 17, 2023 | 5:55 PM

ಏಕವಚನದಲ್ಲೇ ದಾಳಿ ನಡೆಸಿದ ಈಶ್ವರ್ ಕೋಲಾರದಲ್ಲಿ ಒಬ್ಬ ಮೆಂಟಲ್ ಗಿರಾಕಿಯ ರಾಜ್ಯಭಾರ ನಡೆದಿದೆ, ಅವನ ಹೆಸರು ನೆನಪಿಟ್ಟುಕೊಳ್ಳುವಂಥದಲ್ಲ, ಸಂಸದನಾಗಿ ಕ್ಷೇತ್ರಕ್ಕೆ ಅವನ ಕೊಡುಗೆ ಏನೂ ಇಲ್ಲ, ಸುಮಾರು 3 ದಶಕಗಳ ಕಾಲ ಸಂಸದರಾಗಿದ್ದ ಕೆ ಹೆಚ್ ಮುನಿಯಪ್ಪ ಮಾಡಿದ ಅಭಿವೃದ್ಧಿಯನ್ನು ಬಿಟ್ಟರೆ ಕೋಲಾರದಲ್ಲಿ ಮತ್ತೇನೂ ಆಗಿಲ್ಲ ಎಂದರು

ದೇವನಹಳ್ಳಿ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ (S Muniswamy) ನಡುವೆ ಪೂರ್ಣ ಪ್ರಮಾಣದ ಯುದ್ಧ ಘೋಷಣೆಯಾದಂತಿದೆ. ಪರಸ್ಪರ ಬೈದಾಡೋದು, ಕೆಸರೆರಚಾಟ ಸಾರ್ವಜನಿಕವಾಗಿ (publicly) ಜಾರಿಯಲ್ಲಿದೆ. ಇವತ್ತು ದೇವನಹಳ್ಳಿಯಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಮಾತಾಡಿದ ಪ್ರದೀಪ್, ಸಂಸದನನ್ನು ಮೆಂಟಲ್ ಗಿರಾಕಿ ಅಂತ ಉಲ್ಲೇಖಿಸಿದರು. ಏಕವಚನದಲ್ಲೇ ದಾಳಿ ನಡೆಸಿದ ಅವರು ಕೋಲಾರದಲ್ಲಿ ಒಬ್ಬ ಮೆಂಟಲ್ ಗಿರಾಕಿಯ ರಾಜ್ಯಭಾರ ನಡೆದಿದೆ, ಅವನ ಹೆಸರು ನೆನಪಿಟ್ಟುಕೊಳ್ಳುವಂಥದಲ್ಲ, ಸಂಸದನಾಗಿ ಕ್ಷೇತ್ರಕ್ಕೆ ಅವನ ಕೊಡುಗೆ ಏನೂ ಇಲ್ಲ, ಸುಮಾರು 3 ದಶಕಗಳ ಕಾಲ ಸಂಸದರಾಗಿದ್ದ ಕೆ ಹೆಚ್ ಮುನಿಯಪ್ಪ ಮಾಡಿದ ಅಭಿವೃದ್ಧಿಯನ್ನು ಬಿಟ್ಟರೆ ಕೋಲಾರದಲ್ಲಿ ಮತ್ತೇನೂ ಆಗಿಲ್ಲ, ಲೋಕಸಭಾ ಚುನಾವಣೆಯಲ್ಲಿ ಕೇವಲ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ಮಾತ್ರ ಗಮನ ಹರಿಸೋಣ ಅಂದಿಕೊಂಡಿದ್ದೆ, ಆದರೆ ಇವನನ್ನು ಈ ಬಾರಿ ಸೋಲಿಸಲು ಕೋಲಾರದಲ್ಲೂ ಓಡಾಡುತ್ತೇನೆ ಎಂದು ಪ್ರದೀಪ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More