ಗೂಂಡಾಗಿರಿಗೆ ಗೂಂಡಾಗಿರಿ ಉತ್ತರವಲ್ಲ, ಕಾನೂನು ಮೂಲಕ ಹೋರಾಟ ಮಾಡುವೆ: ಸಿಟಿ ರವಿ
ಹುಟ್ಟು-ಸಾವು ಮತ್ತು ಆಯಸ್ಸನ್ನು ದೇವರು ನಿರ್ಧರಿಸುತ್ತಾನೆ, ಎಲ್ಲ ಆತನಿಗೆ ಬಿಟ್ಟಿದ್ದು, 37 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡುತ್ತಿದ್ದಾಗ ತನ್ನ ತಲೆಗೆ ಗನ್ ಇಟ್ಟು ಹೆದರಿಸಲಾಗಿತ್ತು, ಆಗಲೂ ತಾನು ಹೆದರಿರಲಿಲ್ಲ ಎಂದು ಹೇಳಿದ ರವಿಯವರ ಮುಖದಲ್ಲಿ ಬಳಲಿಕೆ ಎದ್ದು ಕಾಣುತಿತ್ತು, ಮೊನ್ನೆ ರಾತ್ರಿಯೆಲ್ಲ ಅವರು ನಿದ್ದೆ ಮಾಡಿರಲಿಲ್ಲ ಮತ್ತು ಊಟ ತಿಂಡಿ ಸಹ ಅವರಿಗೆ ಸಿಕ್ಕಿರಲಿಲ್ಲ.
ಬೆಂಗಳೂರು: ನಿನ್ನೆ ಪೊಲೀಸ್ ಬಂಧನದಿಂದ ಮುಕ್ತರಾದ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಗೂಂಡಾಗಿರಿಗೆ ಕಾನೂನು ರೀತ್ಯಾ ಉತ್ತರ ಕೊಡೋದಾಗಿ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಗೂಂಡಾಗಿರಿಗೆ ಗೂಂಡಾಗಿರಿ ಉತ್ತರವಾಗಲ್ಲ, ತನಗೋಸ್ಕರ ಕಾನೂನು ಇದೆ, ತಾನು ಬದುಕಿ ಬಂದಿದ್ದೇ ಪುಣ್ಯ ಅಂತ ಸಚಿವರೊಬ್ಬರು ಹೇಳ್ತಾ ಇದ್ದರು, ಕರ್ನಾಟಕವನ್ನು ಅವರೇನು ಬನಾನಾ ರಿಪಬ್ಲಿಕ್ ಅಂದುಕೊಂಡಿದ್ದಾರೆಯೇ? ಇಂಥವರ ಕೈಗೆ ಅಧಿಕಾರದ ಚುಕ್ಕಾಣಿ ಸಿಕ್ಕರೆ ಪರಿಸ್ಥಿತಿ ಏನಾಗಬೇಡ ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಪ್ಪ ತಪ್ಪು ಮಾಡಲ್ಲ ಅಂತ ಗೊತ್ತಿತ್ತು, ಸತ್ಯಕ್ಕೆ ಜಯ ಸಿಕ್ಕಿದೆ: ಸೂರ್ಯ, ಸಿಟಿ ರವಿ ಮಗ