ಅಪ್ಪ ತಪ್ಪು ಮಾಡಲ್ಲ ಅಂತ ಗೊತ್ತಿತ್ತು, ಸತ್ಯಕ್ಕೆ ಜಯ ಸಿಕ್ಕಿದೆ: ಸೂರ್ಯ, ಸಿಟಿ ರವಿ ಮಗ
ಬೆಳಗಾವಿ ಪೊಲೀಸರು ರವಿಯವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಕರೆತರುವಾಗಲೇ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶಕ್ಕಿಂತ ಮುಂಚಿನಿಂದ ಹಿಂದೂ ಕಾರ್ಯಕರ್ತರು ಸಿಟಿ ರವಿಯವರ ಮನೆ ಬಳಿ ನೆರೆದು ಸೂರ್ಯನಿಗೆ ಧೈರ್ಯ ತುಂಬುತ್ತಿದ್ದರು. ವಿಧಾನ ಪರಿಷತ್ ಸದಸ್ಯರಾಗಿರುವ ಎಂಕೆ ಪ್ರಾಣೇಶ್ ಸೂರ್ಯನೊಂದಿಗೆ ಮಾತಾಡಿದ್ದರು.
ಚಿಕ್ಕಮಗಳೂರು: ಬಂಧನಕ್ಕೊಳಗಾಗಿದ್ದ ಸಿಟಿ ರವಿಯವರನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದು ವಿಧಾನ ಪರಿಷತ್ ಸದಸ್ಯನ ಕುಟುಂಬಸ್ಥರಿಗೆ ಭಾರೀ ಸಂತಸವನ್ನುಂಟು ಮಾಡಿದೆ ಮತ್ತು ನಗರದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನಮ್ಮ ಚಿಕ್ಕಮಗಳೂರು ವರದಿಗಾರ ರವಿಯವರ ಮಗ ಸೂರ್ಯನೊಂದಿಗೆ ಮಾತಾಡಿದ್ದಾರೆ. ಅಪ್ಪ ಬಿಡುಗಡೆಯಾಗಿರುವುದು ಬಹಳ ಸಂತೋಷವನ್ನುಂಟು ಮಾಡಿದೆ, ಅವರು ಯಾವತ್ತೂ ತಪ್ಪು ಮಾಡುವವರಲ್ಲ ಅಂತ ಗೊತ್ತಿತ್ತು, ಸತ್ಯಕ್ಕೆ ಜಯ ಸಿಕ್ಕಿದೆ, ಅವರು ಎಂಥವರು ಅಂತ ಎಲ್ಲರಿಗೂ ಗೊತ್ತಿದೆ ಎಂದು ಸೂರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕಮಗಳೂರಲ್ಲಿರುವ ಸಿಟಿ ರವಿ ಮನೆಗೆ ತೆರಳಿ ಮಗ ಸೂರ್ಯನಿಗೆ ದೈರ್ಯ ಹೇಳಿದ ಎಂಕೆ ಪ್ರಾಣೇಶ್
Latest Videos