ಚಿಕ್ಕಮಗಳೂರಲ್ಲಿರುವ ಸಿಟಿ ರವಿ ಮನೆಗೆ ತೆರಳಿ ಮಗ ಸೂರ್ಯನಿಗೆ ದೈರ್ಯ ಹೇಳಿದ ಎಂಕೆ ಪ್ರಾಣೇಶ್
ಚಿಕ್ಕಮಗಳೂರಿನ ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಸದ್ಯಕ್ಕೆ ಮನೆಯಲ್ಲಿ ಸೂರ್ಯ ಒಬ್ಬರೇ ಇದ್ದಾರೆ. ನಾವು ಈಗಾಗಲೇ ವರದಿ ಮಾಡಿರುವಂತೆ ರವಿಯವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಸದನದಲ್ಲಿ ಅವಹೇಳನಕಾರಿ ಪದ ಬಳಸಿರುವ ಅರೋಪದಲ್ಲಿ ಬಂಧಿಸಲಾಗಿದೆ ಮತ್ತು ನಿನ್ನೆ ಸಾಯಂಕಾಲ ಪೊಲೀಸ್ ಕಸ್ಟಡಿಯಲ್ಲೇ ಅವರ ಮೇಲೆ ಹಲ್ಲೆ ನಡೆದು ತಲೆಗೆ ಗಾಯವಾಗಿದೆ.
ಚಿಕ್ಕಮಗಳೂರು: ಅಪ್ಪ ಶಾಲಾ ಮಾಸ್ತರಾಗಿರಲಿ ಇಲ್ಲವೇ ವಿಧಾನ ಪರಿಷತ್ ಸದಸ್ಯ, ಅವರು ತೊಂದರೆಗೊಳಗಾದಾಗ ಮಕ್ಕಳು ಭೀತಿಗೊಳಗಾಗುವುದು, ಆತಂಕಕ್ಕೀಡಾಗುವುದು ಸಹಜವೇ. ದೃಶ್ಯಗಳಲ್ಲಿ ಕಾಣುತ್ತಿರೋದು ಸಿಟಿ ರವಿಯವರ ಮಗ ಸೂರ್ಯ. ಅಪ್ಪ ಅರೆಸ್ಟಾಗಿರುವುದರಿಂದ ಸೂರ್ಯ ವ್ಯಾಕುಲಗೊಂಡಿದ್ದಾರೆ, ಹಾಗಾಗೇ ವಿಧಾನ ಪರಿಷತ್ ಉಪಾಧ್ಯಕ್ಷ ಎಂಕೆ ಪ್ರಾಣೇಶ್, ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ರವಿ ಮನೆಗೆ ಭೇಟಿ ನೀಡಿ ಸೂರ್ಯನಿಗೆ ಧೈರ್ಯ ಹೇಳಿದ್ದಾರೆ. ಪ್ರಾಣೇಶ್ ಅವರಲ್ಲದೆ ಹಿಂದೂ ಸಂಘಟನೆಗಳ ಹಲವಾರು ಮುಖಂಡರು ರವಿ ಮನೆಯಲ್ಲಿ ಸೇರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ ಕೋರ್ಟ್ ಮಹತ್ವದ ಆದೇಶ: ಸಿಟಿ ರವಿ ಬೆಂಗಳೂರಿಗೆ ಶಿಫ್ಟ್!
Latest Videos