ಸಿಟಿ ರವಿಯವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ರಸ್ತೆ ಮೂಲಕ ಕರೆದೊಯ್ಯುತ್ತಿರುವ ಪೊಲೀಸರು
ಪೊಲೀಸರು ಕಳೆದ ರಾತ್ರಿಯಿಡೀ ಊರಿಂದ ಊರಿಗೆ ಅಲೆದಾಡಿಸಿದ್ದಾರೆ ಮತ್ತು ಜನಪ್ರತಿನಿಧಿಯಾಗಿದ್ದರೂ ಊಟ ಮತ್ತು ನೀರು ಕೊಟ್ಟಿಲ್ಲ ಎಂದು ಕೋರ್ಟ್ಗೆ ನೀಡಿದ ತಮ್ಮ ಹೇಳಿಕೆಯಲ್ಲಿ ರವಿ ತಿಳಿಸಿದ್ದಾರೆ. ರವಿ ಬಂಧನ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಎದ್ದಿವೆ, ಕಾನೂನನ್ನು ಉಲ್ಲಂಘಿಸಿ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಬೆಳಗಾವಿ: ನಗರದ ಕೋರ್ಟೊಂದರ ಆದೇಶದ ಮೇರೆಗೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಬೆಳಗಾವಿಯಿಂದ ಬೆಂಗಳೂರಿಗೆ ಕರೆದೊಯ್ಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಭಾರಿ ಪೊಲೀಸ್ ಭದ್ರತೆಯಲ್ಲಿ ರವಿಯವರನ್ನು ರಸ್ತೆಯ ಮೂಲಕ ರಾಜ್ಯದ ರಾಜಧಾನಿಗೆ ಕರೆದೊಯ್ಯಲಾಗುತ್ತಿದೆ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಒಬ್ಬ ಡಿಸಿಪಿ, ಮೂವರು ಸಿಪಿಐ ಮತ್ತು ಕೆಲ ಪೊಲೀಸ್ ಇನ್ಸ್ಪೆಕ್ಟರ್ ಗಳ ಭದ್ರತೆಯಲ್ಲಿ ರವಿಯವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಆರೋಪ: ಸಿಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
Latest Videos