ನನ್ನ ಮೇಲೆ ದಾಳಿ ಮಾಡಿದವನನ್ನು ಸುಮ್ಮನೆ ಬಿಡುವುದಿಲ್ಲ, ಕಾನೂನು ರೀತಿ ಹೋರಾಟ ನಡೆಸುತ್ತೇನೆ: ಸುಂಕದಕಟ್ಟೆ ಆ್ಯಸಿಡ್ ಸಂತ್ರಸ್ತೆ
ಆ್ಯಸಿಡ್ ಮಾರಾಟವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದಾಗಲೇ ತಮ್ಮಂಥ ಯುವತಿಯರ ಮೇಲೆ ನಡೆಯುವ ದಾಳಿಗಳನ್ನು ನಿಲ್ಲಿಸುವುದು ಸಾಧ್ಯ ಎಂದು ಅವರು ಹೇಳಿದರು.
ಸುಮಾರು ಮೂರು ತಿಂಗಳು ಹಿಂದೆ ಬೆಂಗಳೂರಿನ ಸುಂಕದಕಟ್ಟೆ ಏರಿಯಾದಲ್ಲಿ ಆ್ಯಸಿಡ್ ದಾಳಿಗೊಳಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ವಾಪಸ್ಸಾಗಿರುವ ಸಂತ್ರಸ್ತೆ ಟಿವಿ9 ಕನ್ನಡ ವಾಹಿನಿಯ ಜೊತೆ ತಮ್ಮ ನೋವನ್ನು ಹೇಳಿಕೊಂಡರು. ಆ್ಯಸಿಡ್ ಮಾರಾಟವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದಾಗಲೇ ತಮ್ಮಂಥ ಯುವತಿಯರ ಮೇಲೆ ನಡೆಯುವ ದಾಳಿಗಳನ್ನು ನಿಲ್ಲಿಸುವುದು ಸಾಧ್ಯ ಎಂದು ಅವರು ಹೇಳಿದರು. ತನ್ನ ಮೇಲೆ ದಾಳಿ ಮಾಡಿದವನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸಂತ್ರಸ್ತೆ ಹೇಳಿದರು.