ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನದ ಆರವಣದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿತೊಂದು ಚಿರತೆ!

ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನದ ಆರವಣದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿತೊಂದು ಚಿರತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2022 | 1:08 PM

ಆಗಸ್ಟ್ 9 ರಂದು ಕಾಣಿಸಿಕೊಂಡು ದೇವಸ್ಥಾನಕ್ಕೆ ಹತ್ತಿರದಲ್ಲಿರುವ ಬಂಡೆಯೊಂದರ ಮೇಲೆ ಸುಮಾರು ಹೊತ್ತು ಕುಳಿತು ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ಅಂಜನಾದ್ರಿ ಬೆಟ್ಟದಲ್ಲಿರುವ (Anjanadri Hill) ಹುನುಮ ದೇವಸ್ಥಾನ (Hanuman Temple) ಆವರಣದಲ್ಲಿ ಈ ಹಿಂದೆಯೂ ಚಿರತೆ (leopard) ಪ್ರತ್ಯಕ್ಷವಾಗಿದ್ದ ಚಿರತೆಯ ವಿಡಿಯೋವನ್ನು ನಾವು ತೋರಿಸಿದ್ದೇವೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಮೇಲೆ ಹನುಮನ ಜನ್ಮಸ್ಥಳ ಎಂದು ನಂಬಲಾಗಿರುವ ಸ್ಥಳದಲ್ಲಿ ಆಗಸ್ಟ್ 9 ರಂದು ಕಾಣಿಸಿಕೊಂಡು ದೇವಸ್ಥಾನಕ್ಕೆ ಹತ್ತಿರದಲ್ಲಿರುವ ಬಂಡೆಯೊಂದರ ಮೇಲೆ ಸುಮಾರು ಹೊತ್ತು ಕುಳಿತು ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.