ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೇಲಿರುವ ರಾಷ್ಟ್ರಪ್ರೇಮ ರಾಷ್ಟ್ರಧ್ವಜದ ಮೇಲೆ ಯಾಕಿಲ್ಲ? ಶಿವರಾಜ ತಂಗಡಗಿ
ಚೀನಾದಿಂದ ತಿರಂಗವನ್ನು ಆಮದು ಮಾಡಿಕೊಳ್ಳುವುದು ಮೇಕ್ ಇನ್ ಇಂಡಿಯಾದ ಭಾಗವೇ ಅಂತ ಅವರು ವ್ಯಂಗ್ಯವಾಡಿದರು.
Koppal: ಬಿಜೆಪಿ ನಾಯಕರು ಡೋಂಗಿ ರಾಷ್ಟ್ರಭಕ್ತರು, ಅವರ ಬಂಡವಾಳವೆಲ್ಲ ದೇಶಕ್ಕೆ ಗೊತ್ತಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ (Shivaraj Tangadigi) ಕೊಪ್ಪಳದಲ್ಲಿ ಶುಕ್ರವಾರ ಹೇಳಿದರು. ದಿ ಕಾಶ್ಮೀರ್ ಫೈಲ್ಸ್ (The Kashmir Files) ಮೇಲೆ ತೋರಿಸುವ ರಾಷ್ಟ್ರಪ್ರೇಮವನ್ನು ರಾಷ್ಟ್ರಧ್ವಜದ ಮೇಲೆ ಯಾಕೆ ಇವರು ತೋರಿಸುವುದಿಲ್ಲ?. ತಮ್ಮ ಶಾಸಕಕರಿಗೆ ಮತ್ತು ಸಂಸದರಿಗೆ ಉಚಿತವಾಗಿ ಈ ಚಿತ್ರವನ್ನು ತೋರಿಸುವ ಬಿಜೆಪಿ ಅದಕ್ಕೆ ತೆರಿಗೆ ವಿನಾಯಿತಿಯನ್ನೂ (taxfree) ಘೋಷಿಸುತ್ತದೆ ಎಂದು ಹೇಳಿದ ತಂಗಡಗಿ ಅವರಲ್ಲಿ ನಿಜವಾದ ರಾಷ್ಟ್ರಪ್ರೇಮ ಇದ್ದಲ್ಲಿ ತಿರಂಗವನ್ನು ಉಚಿತವಾಗಿ ಹಂಚಲಿ ಎಂದರು. ಚೀನಾದಿಂದ ತಿರಂಗವನ್ನು ಆಮದು ಮಾಡಿಕೊಳ್ಳುವುದು ಮೇಕ್ ಇನ್ ಇಂಡಿಯಾದ ಭಾಗವೇ ಅಂತ ಅವರು ವ್ಯಂಗ್ಯವಾಡಿದರು.
Latest Videos