Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಜೊತೆ ಮೈತ್ರಿ ವಿಷಯ ಮಾತಾಡಲಾರೆ, ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಾರೆ: ಹೆಚ್ ಡಿ ದೇವೇಗೌಡ

ಬಿಜೆಪಿ ಜೊತೆ ಮೈತ್ರಿ ವಿಷಯ ಮಾತಾಡಲಾರೆ, ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಾರೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 22, 2023 | 2:16 PM

ನಿನ್ನೆ ದೆಹಲಿಗೆ ಹೊರಡುವ ಮೊದಲು ಕುಮಾರಸ್ವಾಮಿ, ಮೈತ್ರಿ ವಿಷಯದಲ್ಲಿ ಅಗತ್ಯ ಬಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆಯಲಿದೆ ಅಂತ ಹೇಳಿದ್ದರು. ಆದರೆ ದೊಡ್ಡಗೌಡರು ಅದಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಮಾತಾಡಿದರು.

ದೆಹಲಿ: ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಇನ್ನೂ ಒಗಟಾಗಿಯೇ ಉಳಿದಿದೆ. ದೆಹಲಿಯಲ್ಲಿ ಇಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ​  (HD Devegowda) ಮೈತ್ರಿ ಅಥವಾ ಹೊಂದಾಣಿಕೆ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಿಜೆಪಿ ಜೊತೆ ಮೈತ್ರಿ ಬೆಳಸುವುದು ಹೆಚ್ ಡಿ ಕುಮಾರಸ್ವಾಮಿ (HD Kumarswamy) ಅವರಿಗೆ ಬಿಟ್ಟ ವಿಚಾರ, ಯಾಕೆಂದರೆ ರಾಜ್ಯದಲ್ಲಿ ಹೋರಾಟ ನಡೆಸುವವರು ಅವರು, ಹಾಗಾಗಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಪ್ರತಿಕ್ರಿಯೆಯನ್ನೂ ನೀಡುತ್ತಾರೆ ಎಂದು ದೇವೇಗೌಡ ಹೇಳಿದರು. ಗುರುವಾರದಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಅವರನ್ನು ಭೇಟಿಯಾದ ಹಿನ್ನೆಲೆ ಕುರಿತು ಕೇಳಿದಾಗ ಅವರು ತಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ ಅಂದರು. ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆದ ಬಳಿಕ ಮತ್ತು ಇದಕ್ಕೂ ಮುಂಚೆ ಮಾಧ್ಯಮದವರು ಕೇಳಿದಾಗಲೂ ತಾವು ಅದನ್ನೇ ಹೇಳಿದ್ದು ಎಂದು ದೇವೇಗೌಡ ಹೇಳಿದರು. ನಿನ್ನೆ ದೆಹಲಿಗೆ ಹೊರಡುವ ಮೊದಲು ಕುಮಾರಸ್ವಾಮಿ, ಮೈತ್ರಿ ವಿಷಯದಲ್ಲಿ ಅಗತ್ಯ ಬಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆಯಲಿದೆ ಅಂತ ಹೇಳಿದ್ದರು. ಆದರೆ ದೊಡ್ಡಗೌಡರು ಅದಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಮಾತಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ