ಪಾಕಿಸ್ತಾನ್ ಪರ ಕೂಗಿದ್ದು ದೃಢಪಟ್ಟರೆ ಕೂಗಿದವರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ, ಮುಖ್ಯಮಂತ್ರಿ
ವಿಧಾನ ಸಭೆಯಂಥ ಪವಿತ್ರ ಸ್ಥಳದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳು ಕೇಳಿ ಬರುತ್ತಿವೆಯಲ್ಲ ಎಂದು ಕೇಳಿದಾಗ, ಘೋಷಣೆ ಕೂಗುವವನಿಗೆ ಯಾವ ಸ್ಥಳವಾದರೇನು ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯವರೇನಾದರೂ ಸುಳ್ಳು ಆರೋಪ ಮಾಡುತ್ತಿದ್ದಾರಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಎಫ್ ಎಸ್ ಎಲ್ ವರದಿ ಕೈಗೆ ಸಿಗದ ಹೊರತು ಏನೂ ಹೇಳಲಾಗದು ಎಂದರು.
ಬೆಂಗಳೂರು: ವಿಧಾನಸೌಧದಲ್ಲಿ ನಿನ್ನೆ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ಡಾ ನಾಸೀರ್ ಹುಸ್ಸೇನ್ (Dr Syed Naseer Hussain) ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ದೃಢಪಟ್ಟರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಇಂದು ವಿಧಾನಸೌಧದ ಬಳಿ ಮಾತಾಡಿದ ಸಿದ್ದರಾಮಯ್ಯ, ರಾಷ್ಟ್ರದ್ರೋಹದಂಥ ಕೃತ್ಯಗಳನ್ನು ತಮ್ಮ ಸರ್ಕಾರ ಸಹಿಸಲ್ಲ, ಫುಟೇಜನ್ನು ಪರಿಶೀಲನೆಗಾಗಿ ಪೋರೆನ್ಸಿಕ್ ಲ್ಯಾಬ್ (forensic lab) ಕಳಿಸಲಾಗಿದೆ, ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ದೃಢಪಟ್ಟರೆ, ಕೂಗಿದವನು ಯಾವನೇ ಆಗಿರಲಿ ಅವನ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ವಿಧಾನ ಸಭೆಯಂಥ ಪವಿತ್ರ ಸ್ಥಳದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳು ಕೇಳಿ ಬರುತ್ತಿವೆಯಲ್ಲ ಎಂದು ಕೇಳಿದಾಗ, ಘೋಷಣೆ ಕೂಗುವವನಿಗೆ ಯಾವ ಸ್ಥಳವಾದರೇನು ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯವರೇನಾದರೂ ಸುಳ್ಳು ಆರೋಪ ಮಾಡುತ್ತಿದ್ದಾರಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಎಫ್ ಎಸ್ ಎಲ್ ವರದಿ ಕೈಗೆ ಸಿಗದ ಹೊರತು ಏನೂ ಹೇಳಲಾಗದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಪರ ಘೋಷಣೆ: ಗೃಹ ಸಚಿವರ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ದೌಡು