ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರವೇ ಮುಂದಳತ್ವ ವಹಿಸಿದರೆ ಸಹಕಾರ ನೀಡಲು ಕಾಂಗ್ರೆಸ್ ತಯಾರಿದೆ: ಡಿಕೆ ಶಿವಕುಮಾರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 08, 2022 | 8:48 PM

ಮೇಕೆದಾಟು ಯೋಜನೆ ಅನಷ್ಠಾನಕ್ಕೆ ಬಿಜೆಪಿಯೇ ಮುಂದಾಳತ್ವ ವಹಿಸಲಿ ಎಂದು ಶಿವಕುಮಾರ ಸವಾಲು ಹಾಕಿದರು. ಸರ್ವಪಕ್ಷಗಳ ನಿಯೋಗವನ್ನು ಬಿಜೆಪಿ ಕರೆದೊಯ್ಯಲಿ, ಅದಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನು ಮಾಡಲು ತಾವು ಸಿದ್ಧರಿರುವುದಾಗಿ ಅವರು ಹೇಳಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರವಿವಾರದಿಂದ ಪಾದಯಾತ್ರೆ ನಡೆಸಲಿದೆ. ಪಕ್ಷದ ನಿರ್ಧಾರರ ಮತ್ತು ಅದಕ್ಕೆ ಬಿಜೆಪಿ ಹಾಗೂ ಜೆಡಿ(ಎಸ್) ಪಕ್ಷದ ನಾಯಕರಿಂದ ಎದುರಾಗುತ್ತಿರುವ ವಿರೋಧ ಮತ್ತು ಟೀಕೆಗಳ ಕುರಿತು ಮಾತಾಡಲು ಖುದ್ದು ಶಿವಕುಮಾರ್ ಅವರೇ ಟಿವಿ9 ಸ್ಟುಡಿಯೋಗೆ ಶನಿವಾರ ಆಗಮಿಸಿದ್ದರು. ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್ ಮುಖಂಡ ಸಮರ್ಪಕ ಉತ್ತರಗಳನ್ನು ನೀಡಲಿಲ್ಲ. ಕೇಳಿದ ಪ್ರಶ್ನೆಯಲ್ಲೇ ಉತ್ತರ ಹುಡುಕುವ ಪ್ರಯತ್ನವನ್ನು ಅವರು ಮಾಡಿದರು. ಮಾಜಿ ಪ್ರಧಾನಿ ಮತ್ತು ಜೆಡಿ(ಎಸ್) ಪಕ್ಷದ ರಾಷ್ಟ್ರೀಯ ನಾಯಕ ದೇವೇಗೌಡ ಅವರಿಗೆ ಕಾಂಗ್ರೆಸ್ ಮಾಡುತ್ತಿರುವ ಪಾದಯಾತ್ರೆ ಬಗ್ಗೆ ಯಾವುದೇ ತಕರಾರಿಲ್ಲ ಅಂತ ಹೇಳಿದ ಡಿಕೆಶಿ ಪ್ರತಿದಿನ ಪಾದಯಾತ್ರೆಯನ್ನು ಟೀಕಿಸಿ ಪುಟಗಟ್ಟಲೆ ಟ್ವೀಟ್ ಮಾಡುತ್ತಿರುವ ಮತ್ತು ಮಾಧ್ಯಮಗಳೆದುರು ಮೇಕೆದಾಟು ಯೋಜನೆಯ ಪೂರ್ಣ ಶ್ರೇಯಸ್ಸು ತನಗೆ ಸಲ್ಲಬೇಕು ಅಂತ ಅಬ್ಬರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಪಾದಯಾತ್ರೆ ಬಗ್ಗೆ ತಕರಾರಿಲ್ಲ ಎಂದು ಹೇಳಿ ಆಶ್ವರ್ಯ ಮೂಡಿಸಿದರು.

ಶಿವಕುಮಾರ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯ ಮೂಲಕ ಡಿಕೆಶಿ ಜನಾನುರಾಗಕ್ಕೆ ಪಾತ್ರರಾಗುತ್ತಾರೆ, ಒಂದು ವೇಳೆ 2023ರ ವಿಧಾನ ಸಭಾ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ ಎಂಬ ಆತಂಕದಲ್ಲಿರುವ ಸಿದ್ದರಾಮಯ್ಯನವರೇ ಪಾದಯಾತ್ರೆಯನ್ನು ಹಳಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಾದಯಾತ್ರೆ ಅವರಿಬ್ಬರ ಸ್ವಾರ್ಥ ಬಿಟ್ಟರೆ ಬೇರೇನೂ ಅಲ್ಲ ಎಂದು ಬಿಜೆಪಿ ಮಾಡಿರುವ ಟ್ವೀಟನ್ನು ಶಿವಕುಮಾರ ಅವರ ಗಮನಕ್ಕೆ ತಂದಾಗ, ಕಾಂಗ್ರೆಸ್ ನಾಯಕ; ಈ ಮಾತುಗಳನ್ನು ಅವರು ಟ್ವಿಟ್ಗಳಲ್ಲಿ ಹೇಳುವ ಬದಲು ಜನರ ಮುಂದೆ ಹೇಳಲಿ ಮತ್ತು ತಮಗೂ ಬದ್ಧತೆಯಿದೆ ಎಂದು ತೋರಿಸಲಿ ಎಂದರು.

ಮೇಕೆದಾಟು ಯೋಜನೆ ಅನಷ್ಠಾನಕ್ಕೆ ಬಿಜೆಪಿಯೇ ಮುಂದಾಳತ್ವ ವಹಿಸಲಿ ಎಂದು ಶಿವಕುಮಾರ ಸವಾಲು ಹಾಕಿದರು. ಸರ್ವಪಕ್ಷಗಳ ನಿಯೋಗವನ್ನು ಬಿಜೆಪಿ ಕರೆದೊಯ್ಯಲಿ, ಅದಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನು ಮಾಡಲು ತಾವು ಸಿದ್ಧರಿರುವುದಾಗಿ ಅವರು ಹೇಳಿದರು.

ಕಾಂಗ್ರೆಸ್ ಬೇಡ ಅನ್ನೋ ಭಾವನೆ ಅವರಲ್ಲಿದ್ದರೆ ತಮ್ಮನ್ನು ಬಿಟ್ಟು ಅವರೇ ಹೋಗಲಿ, ಅವರೇ ಯೋಜನೆಯನ್ನು ಜಾರಿಗೊಳಿಸಲಿ, ಅದಕ್ಕೂ ಕಾಂಗ್ರೆಸ್ ಸಿದ್ಧವಾಗಿದೆ, ನಾವು ಸಹಕಾರ ನೀಡುತ್ತೇವೆ, ನಮ್ಮಲ್ಲಿ ಆ ಬದ್ಧತೆ ಇದೆ ಅಂತ ಅವರು ಹೇಳಿದರು.

ಸರ್ಕಾರ ಯಾವುದೇ ಅಡೆತಡೆಯೊಡ್ಡಿದರೂ ಪಾದಯಾತ್ರೆಯನ್ನು ಪೂರ್ತಿಗೊಳಿಸುವಿರಾ ಎಂಬ ಪ್ರಶ್ನೆಗೆ ಡಿಕೆಶಿ ಒಬ್ಬ ತತ್ವಜ್ಞಾನಿಯ ಹಾಗೆ, ಮನಸಿದ್ದಲ್ಲಿ ಮಾರ್ಗವಿದೆ, ಭಕ್ತಿಯಿರುವಲ್ಲಿ ಭಗವಂತನಿರುತ್ತಾನೆ ಎಂದು ಹೇಳಿ ಪ್ರಯತ್ನವನ್ನಂತೂ ನಿಲ್ಲಿಸುವುದಿಲ್ಲ ಎಂದರು.

ಇದನ್ನೂ ಓದಿ:   Viral Video: ತಂದೆ ಬರೆದ ಪತ್ರವನ್ನೇ ಮದುವೆಯ ಉಡುಪು ಮಾಡಿಕೊಂಡ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

Published on: Jan 08, 2022 08:48 PM