AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಂದೆ ಬರೆದ ಪತ್ರವನ್ನೇ ಮದುವೆಯ ಉಡುಪು ಮಾಡಿಕೊಂಡ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

ಸುವನ್ಯಾ ತಂದೆ ಜನ್ಮದಿನದಂದು ತನಗಾಗಿ ಬರೆದ ಪತ್ರದಲ್ಲಿನ ಸಾಲುಗಳನ್ನು ಮದುವೆ ದಿನ ಧರಿಸುವ ದುಪ್ಪಾಟದಲ್ಲಿ ಕಸೂತಿ ಮೂಲಕ ಬಳಸಿಕೊಂಡಿದ್ದಾರೆ. ತಂದೆ ಸಾವನ್ನಪ್ಪಿದ್ದು, ಅವರ ನೆನಪಿಗಾಗಿ ಮತ್ತು ಮದುವೆಯ ದಿನ ಅವರ ಇರುವಿಕೆಯನ್ನು ಅನುಭವಿಸಲು ಈ ರೀತಿ ಮಾಡಿದ್ದಾರೆ.

Viral Video: ತಂದೆ ಬರೆದ ಪತ್ರವನ್ನೇ ಮದುವೆಯ ಉಡುಪು ಮಾಡಿಕೊಂಡ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್
ವಧು ತನ್ನ ತಂದೆಯ ಪತ್ರವನ್ನು ದುಪಟ್ಟಾದಲ್ಲಿ ಬರೆದಿದ್ದಾಳೆ
TV9 Web
| Edited By: |

Updated on:Jan 08, 2022 | 10:24 AM

Share

ಮದುವೆ ಎನ್ನುವುದು ಎಲ್ಲರಿಗೂ ವಿಶೇಷ. ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ಜನರು ಬಹಳಷ್ಟು ಪ್ರಯತ್ನ ಪಡುತ್ತಾರೆ. ಈ ವಿಶೇಷ ದಿನದಂದು ಹುಡುಗಿಯರು ಹೆಚ್ಚಾಗಿ ಡಿಸೈನರ್ ಲೆಹೆಂಗಾ, ಡಿಸೈನರ್ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಸದ್ಯ ಮದುವೆಗಾಗಿ (Wedding) ವಿಶೇಷ ರೀತಿಯಲ್ಲಿ ಸಿದ್ಧವಾದ ಮಧುವಿನ (Bride) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ವಿಡಿಯೋದಲ್ಲಿನ ವಧು ತನ್ನ ಮದುವೆಗಾಗಿ ಡಿಸೈನರ್ ಲೆಹೆಂಗಾ ಅಥವಾ ಡಿಸೈನರ್ ಆಭರಣಗಳನ್ನು ಧರಿಸಲಿಲ್ಲ. ಬದಲಾಗಿ ತನ್ನ ತಂದೆ ಬರೆದ ಪತ್ರದಲ್ಲಿನ ಸಾಲುಗಳನ್ನೇ ಡಿಸೈನರ್​ ಆಗಿ ಬಳಸಿಕೊಂಡಿದ್ದಾಳೆ. ಇದನ್ನು ಕಂಡ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿನ ವಧುವಿನ ಹೆಸರು ಸುವನ್ಯಾ. ಇವರು ಇತ್ತೀಚೆಗೆ ರಾಜಸ್ಥಾನದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದಾರೆ. ಅವರು ಸರಳವಾದ ಲೆಹೆಂಗಾ ಮತ್ತು ಸರಳ ಆಭರಣಗಳನ್ನು ಧರಿಸಿದ್ದಾರೆ. ವಧುವಿನ ಲೆಹೆಂಗಾವನ್ನು ಡಿಸೈನರ್ ಸುನೈನಾ ಖೇರಾ ವಿನ್ಯಾಸಗೊಳಿಸಿದ್ದಾರೆ. ಆಕೆಯ ಕೆಂಪು ಬಣ್ಣದ ಲೆಹೆಂಗಾ ಸುಂದರವಾಗಿದೆ. ಲೆಹೆಂಗಾದೊಂದಿಗೆ ನೆಟ್‌ನ ಕೆಂಪು ದುಪಟ್ಟಾ ಧರಿಸಿದ್ದಾರೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ದುಪ್ಪಾಟದ ಮೇಲೆ ತಂದೆ ಬರೆದ ಪತ್ರದ ಸಾಲುಗಳನ್ನು ಉಲ್ಲೇಖಿಸಲಾಗಿದೆ.

ಸುವನ್ಯಾ ತಂದೆ ಜನ್ಮದಿನದಂದು ತನಗಾಗಿ ಬರೆದ ಪತ್ರದಲ್ಲಿನ ಸಾಲುಗಳನ್ನು ಮದುವೆ ದಿನ ಧರಿಸುವ ದುಪ್ಪಾಟದಲ್ಲಿ ಕಸೂತಿ ಮೂಲಕ ಬಳಸಿಕೊಂಡಿದ್ದಾರೆ. ತಂದೆ ಸಾವನ್ನಪ್ಪಿದ್ದು, ಅವರ ನೆನಪಿಗಾಗಿ ಮತ್ತು ಮದುವೆಯ ದಿನ ಅವರ ಇರುವಿಕೆಯನ್ನು ಅನುಭವಿಸಲು ಈ ರೀತಿ ಮಾಡಿದ್ದಾರೆ. ತಂದೆ ಮತ್ತು ಮಗಳ ನಡುವಿನ ಸಂಬಂಧವು ತುಂಬಾ ಸುಂದರವಾಗಿದೆ ಮತ್ತು ಅಮೂಲ್ಯವಾದುದು ಎಂಬುವುದು ಈ ಮೂಲಕ ಮತ್ತೊಮ್ಮೆ ಸಾಭೀತಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ shadiekbaar ಎಂಬ ಹೆಸರಿನ ಖಾತೆಯಿಂದ  ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಇಲ್ಲಿಯವರೆಗೆ ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಕಮೆಂಟ್​ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ ತುಂಬಾ ಮುದ್ದಾಗಿದೆ ಎಂದು ಒಬ್ಬರು ಕಮೆಂಟ್​ ಮಾಡಿದರೆ, ಮತ್ತೊಬ್ಬರು ಇಂತಹ ಮಗಳನ್ನು ಎಲ್ಲರಿಗೂ ನೀಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Video: ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದ ಮಾಲೀಕ: ವಿಡಿಯೋ ವೈರಲ್​

ನೆಟ್ಟಿಗರ ಗಮನ ಸೆಳೆದ ಕಡಲೆಕಾಯಿ ಮಾರಾಟಗಾರನ ಕಚ್ಚಾ ಬಾದಾಮ್​ ಹಾಡು: ವಿಡಿಯೋ ವೈರಲ್​

Published On - 10:19 am, Sat, 8 January 22