ಮಧು ಬಂಗಾರಪ್ಪಗೆ ಹೇರ್ ಕಟ್ ಗಾಗಿ ದುಡ್ಡಿನ ಸಮಸ್ಯೆಯಿದ್ದರೆ ಅದರ ವ್ಯವಸ್ಥೆ ಮಾಡಿಸುತ್ತೇನೆ: ಬಿವೈ ವಿಜಯೇಂದ್ರ

|

Updated on: May 28, 2024 | 1:39 PM

ಶಿಕ್ಷಣ ಇಲಾಖೆಯಲ್ಲಿ ಮಧು ಬಂಗಾರಪ್ಪ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ತನಗೆ ಕನ್ನಡ ಬರಲ್ಲ ಅನ್ನುತ್ತಾರೆ, ಬೆಂಗಳೂರಲ್ಲಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಯ ಉಸ್ತುವಾರಿಯನ್ನು ಲೇಬರ್ ಕಾಂಟ್ರಾಕ್ಟ್ಯರ್ ಗೆ ಒಪ್ಪಿಸುತ್ತಾರೆ ಎಂದು ಹೇಳಿದ ವಿಜಯೇಂದ್ರ, ಹೇರ್ ಕಟ್ ಸಲುವಾಗಿ ಅವರಿಗೆ ಹಣಕಾಸಿನ ಸಮಸ್ಯೆಯಿದ್ದರೆ, ತಮ್ಮ ಯುವಮೋರ್ಚಾಗೆ ಹೇಳಿ ದುಡ್ಡಿನ ವ್ಯವಸ್ಥೆ ಮಾಡಿಸುವುದಾಗಿ ಗೇಲಿ ಮಾಡಿದರು.

ಕಲಬುರಗಿ: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ (guarantee schemes) ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇದ್ದಾರೆ, ಆದರೆ ಫಲಿತಾಂಶದ ದಿನ ಅವರಿಗೆ ದೊಡ್ಡ ನಿರಾಸೆ ಎದುರಾಗಲಿದೆ ಎಂದರು. ಮಧು ಬಂಗಾರಪ್ಪ (Madhu Bangarappa) ಹೇರ್ ಕಟ್ ವಿಷಯದಲ್ಲಿ ನಿನ್ನೆ ಹೇಳಿದ್ದನ್ನೇ ಪುನರಾವರ್ತಿಸಿದ ಅವರು ದಾವಣಗೆರೆಯ ಶಿಕ್ಷಕರು ಅಡಿದ ಮಾತನ್ನು ಮಧು ಬಂಗಾರಪ್ಪ ಅವರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಚುನಾವಣಾ ಪ್ರಚಾರಕ್ಕೆಂದು ತಾನು ಅಲ್ಲಿಗೆ ಹೋದಾಗ ಶಿಕ್ಷಕರು ಒಬ್ಬ ಶಿಕ್ಷಣನ ಸಚಿವ ಮಾದರಿಯಾಗಿರಬೇಕೆಂದು ಮಾತಾಡಿಕೊಳ್ಳುತ್ತಿದ್ದರು ಅದನ್ನೇ ಅವರಿಗೆ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದು ವಿಜಯೇಂದ್ರ ಹೇಳಿದರು. ಶಿಕ್ಷಣ ಇಲಾಖೆಯಲ್ಲಿ ಮಧು ಬಂಗಾರಪ್ಪ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ತನಗೆ ಕನ್ನಡ ಬರಲ್ಲ ಅನ್ನುತ್ತಾರೆ, ಬೆಂಗಳೂರಲ್ಲಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಯ ಉಸ್ತುವಾರಿಯನ್ನು ಲೇಬರ್ ಕಾಂಟ್ರಾಕ್ಟ್ಯರ್ ಗೆ ಒಪ್ಪಿಸುತ್ತಾರೆ ಎಂದು ಹೇಳಿದ ವಿಜಯೇಂದ್ರ, ಹೇರ್ ಕಟ್ ಸಲುವಾಗಿ ಅವರಿಗೆ ಹಣಕಾಸಿನ ಸಮಸ್ಯೆಯಿದ್ದರೆ, ತಮ್ಮ ಯುವಮೋರ್ಚಾಗೆ ಹೇಳಿ ದುಡ್ಡಿನ ವ್ಯವಸ್ಥೆ ಮಾಡಿಸುವುದಾಗಿ ಗೇಲಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಬಿಜೆಪಿ ನಿಲುವು ಸ್ಪಷ್ಟ: ಬಿವೈ ವಿಜಯೇಂದ್ರ

Follow us on