ಎಪಿಜೆ ಅಬ್ದುಲ್ ಕಲಾಂ ಅವರ ಹೇರ್ ಸ್ಟೈಲ್ ವಿಜಯೇಂದ್ರ ನೋಡಿರಲಿಲ್ಲವೇ? ಮಧು ಬಂಗಾರಪ್ಪ
ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಗಡ್ಡದ ಬಗ್ಗೆ ಮಾತಾಡಿದ ಬಿಜೆಪಿ ನಾಯಕರು 66 ಸ್ಥಾನಕ್ಕಿಳಿದರು, ಈಗ ಲೋಕಸಭಾ ಚುನಾವಣೆಯಲ್ಲಿ ತನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡುತ್ತಿರುವ ಕಾರಣ 26 ಸ್ಥಾನಗಳಿಂದ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದು ಹೇಳಿದರು.
ಮೈಸೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಹೇರ್ ಕಟ್ ಕಾಳಗ ಮುಂದುವರಿದಿದೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬಂಗಾರಪ್ಪ, ವಿಜಯೇಂದ್ರ ತಾವೇ ಹೇರ್ ಕಟ್ ಮಾಡಿಸುತ್ತೇವೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಅಯ್ತು ಅವರೇ ಬಂದು ಹೇರ್ ಕಟ್ ಮಾಡಲಿ, ಆದರೆ ಮೊದಲು ಅವರು ಹೇರ್ ಕಟ್ ಮಾಡುವ ಕ್ವಾಲಿಟಿ (quality) ಹೇಗಿದೆ ಅಂತ ತಾನು ಪರಿಶೀಲಿಸುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಸಚಿವ, ಬಿಜೆಪಿ ನಾಯಕರಿಗೆ ಬೇರೆ ವಿಷಯಗಳಿಲ್ಲವೇ ಮಾತಾಡಲು? ಎಪಿಜೆ ಅಬ್ದುಲ್ ಕಲಾಂ ಅವರು ಕೇಶ ವಿನ್ಯಾಸದ ಬಗ್ಗೆ ವಿಜಯೇಂದ್ರ ಕಾಮೆಂಟ್ ಮಾಡುತ್ತಾರಾ? ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಗಡ್ಡದ ಬಗ್ಗೆ ಮಾತಾಡಿದ ಬಿಜೆಪಿ ನಾಯಕರು 66 ಸ್ಥಾನಕ್ಕಿಳಿದರು, ಈಗ ಲೋಕಸಭಾ ಚುನಾವಣೆಯಲ್ಲಿ ತನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡುತ್ತಿರುವ ಕಾರಣ 26 ಸ್ಥಾನಗಳಿಂದ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಡ್ಡ ಬೆಳೆಸಿದ್ದರು ಮತ್ತು ತಾನೂ ಗಡ್ಡ ಬಿಟ್ಟಿದ್ದೆ, ಆಗ ವಿಜಯೇಂದ್ರ ಏನಾದರೂ ಕಾಮೆಂಟ್ ಮಾಡಿದ್ದರೇ? ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಹುಲ್ ಗಾಂಧಿ ಶಿವಮೊಗ್ಗ ಕಾರ್ಯಕ್ರಮ ಸಿದ್ದತೆಯಲ್ಲಿರುವ ಮಧು ಬಂಗಾರಪ್ಪ 1993ರಲ್ಲಿ ಇಂದಿರಾಗಾಂಧಿ ಅಲ್ಲಿಗೆ ಬಂದಿದ್ದರು ಎಂದರು!