ನನ್ನ ತೋಟದ ಮನೆ ಶಕ್ತಿಕೇಂದ್ರವಾದರೆ ಕಾಂಗ್ರೆಸ್ ಗೆ ಯಾಕೆ ಹೊಟ್ಟಯುರಿ? ಹೆಚ್ ಡಿ ಕುಮಾರಸ್ವಾಮಿ
ಮೇಕೆದಾಟು ಯೋಜನೆ ಜಾರಿಗೆ ಬರಲಿ ಅಂತ ರಸ್ತೆಗಳಲ್ಲಿ ತೂರಾಡಿದ್ದು ತಾನಲ್ಲ ಎಂದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ರೇಡ್ ಮಾಡಿಸುವುದನ್ನು ಅಧಿಕಾರಿಗಳಿಂದ ಫೋನ್ ಮಾಡಿಸುವ ಕೆಲಸ ನಿಲ್ಲಿಸಲಿ ಮತ್ತು ಟ್ವೀಟ್ ಗಳನ್ನು ಮಾಡುವಾಗ ಎಚ್ಚರವಹಿಸಲಿ ಎಂದರು.
ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಬಿಡದಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ (farmhouse) ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್ ಗಳಿಗೆ ಮತ್ತು ರೇಡ್ ಗಳಿಗೆ ಉತ್ತರ ನೀಡಿದ್ದಾರೆ. ಹಬ್ಬದ ದಿನ ತೋಟದ ಮನೆಯಲ್ಲಿ ಊಟಕ್ಕೆ ಸೇರಿದ್ದು ನಿಜ, ಮತ್ತು ವರ್ಷದ ಯಾವುದೇ ಸೀಸನ್ ನಲ್ಲಿ ತನ್ನ ತೋಟದಲ್ಲಿ ಸುಮಾರು 100-120 ಜನ ಕೆಲಸ ಮಾಡುತ್ತಿರುತ್ತಾರೆ, ಇವತ್ತು ಅವರು ಯುಗಾದಿ ಹೊಸತಡುಕು (Ugadi Hosatoduku) ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದ ಕುಮಾರಸ್ವಾಮಿ, ತಾನು ಅಲ್ಲಿ ಪಕ್ಷದ ನಾಯಕರ ಸಭೆ ನಡೆಸಿದರೆ ಕಾಂಗ್ರೆಸ್ ಗೆ ಯಾಕೆ ಹೊಟ್ಟೆಯುರಿ? ಎಂದರು. ಬಿಜೆಪಿ ನಾಯಕರಿಗೆ ಕೇಶವಕೃಪಾ ಕೇಂದ್ರ ಕಚೇರಿಯಾಗಿರುವ ಹಾಗೆ ಜೆಡಿಎಸ್ ಪಕ್ಷಕ್ಕೆ ತನ್ನ ತೋಟದ ಮನೆ ಶಕ್ತಿಕೇಂದ್ರ ಮತ್ತು ಹೆಡ್ ಆಫೀಸು ಎಂದರು. ಮೇಕೆದಾಟು ಯೋಜನೆ ಜಾರಿಗೆ ಬರಲಿ ಅಂತ ರಸ್ತೆಗಳಲ್ಲಿ ತೂರಾಡಿದ್ದು ತಾನಲ್ಲ ಎಂದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ರೇಡ್ ಮಾಡಿಸುವುದನ್ನು ಅಧಿಕಾರಿಗಳಿಂದ ಫೋನ್ ಮಾಡಿಸುವ ಕೆಲಸ ನಿಲ್ಲಿಸಲಿ ಮತ್ತು ಟ್ವೀಟ್ ಗಳನ್ನು ಮಾಡುವಾಗ ಎಚ್ಚರವಹಿಸಲಿ ಎಂದರು. ಹಲವಾರು ಚುನಾವಣೆಗಳನ್ನು ಮಾಡಿರುವ ತನಗೆ ಚುನಾವಣಾ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಅನ್ನೋದು ಗೊತ್ತಿಲ್ಲವೇ ಅಂತ ಅವರು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ, ಕಾರ್ಯಕರ್ತರಿಗೆ ಸಿಗದ ಬಾಡೂಟ