ಸರ್ಕಾರ ಕಠಿಣ ಕ್ರಮ ಜರುಗಿಸದಿದ್ದರೆ ಮರಾಠಿ ಭಾಷಿಕರನ್ನು ಹದ್ದುಬಸ್ತಿನಲ್ಲಿ ಇಡಲಾಗದು: ಬಸನವರಾಜ ಹೊರಟ್ಟಿ, ಪರಿಷತ್ ಚೇರ್ಮನ್
ಮರಾಠಿಗರ ಮೆರೆದಾಟವನ್ನು ಕಡಿಮೆ ಮಾಡಲೆಂದೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಲಾಯಿತು ಮತ್ತು ತಾನಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವನಾಗಿದ್ದೆ ಎಂದು ಹೊರಟ್ಟಿ ಹೇಳಿದರು. ಬೆಳಗಾವಿ, ನಿಪ್ಪಾಣಿ ಮತ್ತು ಖಾನಾಪುರದಲ್ಲಿ ಯಾರೂ ಕನ್ನಡ ಮಾತಾಡಲ್ಲ, ರೈಲಿನಲ್ಲಿ ಪ್ರಯಾಣಿಸುವಾಗ ಗಮನಕ್ಕೆ ಬಂದಿರುವ ಅಂಶವಿದು ಎಂದು ಪರಿಷತ್ ಚೇರ್ಮನ್ ಹೇಳಿದರು.
ಧಾರವಾಡ: ಸಾಮಾನ್ಯವಾಗಿ ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ ಚೇರ್ಮನ್ ಆಗಿರುವವರು ಮಾಧ್ಯಮಗಳಿಗೆ ಹೇಳಿಕೆ ನೀಡಲ್ಲ. ಪರಿಷತ್ ಚೇರ್ಮನ್ ಆಗಿರುವ ಬಸವರಾಜ ಹೊರಟ್ಟಿ ಅವರು ಇವತ್ತು ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಾ ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸಿದರು. ಕನ್ನಡಿಗರು ಲಿಬರಲ್ ಮನಸ್ಥಿತಿಯವರು ಅಂತ ಅವರಿಗೆ ಮನವರಿಕೆಯಾಗಿದೆ, ಹಾಗಾಗೇ ಬೆಳಗಾವಿಯಲ್ಲಿ ಮರಾಠಿ ಮಾತಾಡುವವರ ಪುಂಡಾಟ ಹೆಚ್ಚಾಗಿದೆ, ಸರ್ಕಾರ ಅವರ ಕಠಿಣ ಕ್ರಮಗಳನ್ನು ಜರುಗಿಸದಿದ್ದರೆ ಅದು ನಿಲ್ಲಲಾರದು ಎಂದು ಹೊರಟ್ಟಿ ಹೇಳಿದರು. ಬೆಳಗಾವಿಯ ರಾಜಕಾರನಣಿಗಳು ಕೇವಲ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ ಅಲ್ಲಿನ ಕನ್ನಡಿಗರ ಹಿತರಕ್ಷಣೆ ಬಹಳ ಮುಖ್ಯ ಅನ್ನೋದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದ ಹೊರಟ್ಟಿ ಅಮಾಯಕ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿದ್ದು ಅತ್ಯಂತ ಖಂಡನೀಯ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ