ಯುದ್ಧ ಮಾಡುವುದಾದರೆ ಮಾಡಲಿ, ಭಯೋತ್ಪಾದನೆಯ ಮೂಲೋತ್ಪಾಟನೆ ಆಗಬೇಕು: ಸಿದ್ದರಾಮಯ್ಯ

Updated on: Apr 30, 2025 | 6:49 PM

ಪಾಕಿಸ್ತಾನದ ಜೊತೆ ಯುದ್ಧ ಬೇಕೋ ಬೇಡವೋ ಅಂತ ಬೇರೆ ಬೇರೆ ಪಕ್ಷಗಳ ನಾಯಕರನ್ನು ಕೇಳುವ ಅಗ್ಯತವೇ ಇಲ್ಲ, ಪ್ರಧಾನ ನರೇಂದ್ರ ಮೋದಿಯವರು ಏನೇ ನಿರ್ಧಾರ ತೆಗೆದುಕೊಂಡರೂ ಅವರೊಂದಿಗೆ ನಿಲ್ಲುತ್ತೇವೆ ಅಂತ ಸರ್ವಪಕ್ಷಗಳ ಸಭೆಯಲ್ಲಿ ನಾಯಕರು ಹೇಳಿದ್ದಾರೆ. ನಿನ್ನೆ ಮಿಲಿಟರಿ ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿರುವ ಪ್ರಧಾನಿಯವರು ಯುದ್ಧ ಮತ್ತು ಸಮಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಮುಖ್ಯಸ್ಥರ ವಿವೇಚನೆಗೆ ಬಿಟ್ಟಿದ್ದಾರೆ.

ಬಾಗಲಕೋಟೆ, ಏಪ್ರಿಲ್ 30: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಅನಿವಾರ್ಯವಾದರೆ ಭಾರತ ಯುದ್ಧ ಮಾಡಲಿ, ಅದರೆ ನಮ್ಮ ದೇಶದಿಂದ ಭಯೋತ್ಪಾದನೆ ಮೂಲೋತ್ಪಾಟನೆ ಅಗಬೇಕು, ರಾಷ್ಟ್ರದ ಜನತೆಗೆ ಭದ್ರತೆಯನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು, ಅದಕ್ಕಾಗಿ ಯುದ್ಧ ಮಾಡುವ ಪ್ರಸಂಗ ಎದುರಾದರೆ ಮಾಡಲಿ, ಯುದ್ಧ ಬೇಡ ಅಂತ ತಾನು ಹೇಳೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹಿಂದೆ 1971ರಲ್ಲಿ ಇಂದಿರಾಗಾಂಧಿಯವರು ಪಾಕಿಸ್ತಾನವನ್ನು ಬಗ್ಗುಬಡಿದು ಪಾಕಿಸ್ತಾನದ ಸುಮಾರು 80,000 ಕ್ಕೂ ಹೆಚ್ಚು ಸೈನಿಕರು ಶರಣಾಗುವಂತೆ ಮಾಡಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ:  ಪಾಕಿಸ್ತಾನದ ಪರ ಯಾರೇ ಘೋಷಣೆ ಕೂಗಿದರೂ ಅದು ತಪ್ಪು ಮತ್ತು ದೇಶದ್ರೋಹ: ಸಿದ್ದರಾಮಯ್ಯ, ಸಿಎಂ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ