ದುಡ್ಡಿರುವ ಮಹಿಳೆಯರು ಟಿಕೆಟ್ ಖರೀದಿಸಲಿ ಅವರನ್ನು ತಡೆದವರಾರು? ಶಕ್ತಿ ಯೋಜನೆ ಫಲಾನುಭವಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2024 | 3:07 PM

ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಹಿಳೆಯೊಬ್ಬರು ವೋಟು ಕೇಳಲು ಬಂದಾಗ ಸರ್ಕಾರ ಎಲ್ಲ ಗ್ಯಾರಂಟಿ ಯೋಜನೆನಗಳನ್ನು 5-ವರ್ಷ ಜಾರಿಯಲ್ಲಿಡುವುದಾಗಿ ಹೇಳಿತ್ತು, ಅದು ಹೇಗೆ ಒಂದೂವರೆ ವರ್ಷದವರೆಗೆ ನಡೆಸಿ ನಿಲ್ಲಿಸುತ್ತಾರೆ? ಕೊಟ್ಟ ಮಾತಿಗೆ ಸರ್ಕಾರ ಬದ್ಧವಾಗಿರಲೇಬೇಕು ಎಂದು ಅವರು ಹೇಳುತ್ತಾರೆ.

ಬೆಂಗಳೂರು: ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸುವ ಆಲೋಚನೆಯನ್ನು ಸರ್ಕಾರ ಮಾಡುತ್ತಿದ್ದರೆ ಅದರ ಫಲಾನುಭವಿಗಳು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಟಿವಿ9 ಬೆಂಗಳೂರು ವರದಿಗಾರ್ತಿ ನಗರದ ಕೆಲ ಮಹಿಳೆಯರೊಂದಿಗೆ ಮಾತಾಡಿದ್ದಾರೆ. ಮನೆಗೆಲಸ, ಗಾರೆ ಕೆಲಸ ಮತ್ತು ಗಾರ್ಮೆಂಟ್ಸ್​​​ಗೆ ಹೋಗುವವರಿಗೆ ಬಹಳ ತೊಂದರೆಯಾಗುತ್ತದೆ, ಪ್ರಯಾಣದ ಹಣವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಎಂದು ಮಹಿಳೆಯರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆಶಿಗೆ ಕನಸಿನಲ್ಲಿ ಮಹಿಳೆಯರು, ದೇವರು ಬಂದು ಹೇಳಿದ್ದಾರೋ? ಶಕ್ತಿ ಯೋಜನೆ ಸ್ಥಗಿತ ಸುಳಿವಿಗೆ ಕುಮಾರಸ್ವಾಮಿ ಕಿಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.