ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೇಳಲಿರುವ ಸಿದ್ದರಾಮಯ್ಯ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಯತ್ನಾಳ್
ನವೆಂಬರ್ 14 ರ ನಂತರ ಬಿಜೆಪಿಯ ನಿಷ್ಠಾವಂತ ನಾಯಕರು ಒಂದುಗೂಡಿ ಸರ್ಕಾರದ ವಿರುದ್ಧ ಬೀದರ್ನಿಂದ ಪ್ರತಿಭಟನೆ ಆರಂಭಿಸಲಿದ್ದೇವೆ, ತಮ್ಮ ಹೋರಾಟ ತೀವ್ರಗೊಳ್ಳಲಿದೆ, ಸರ್ಕಾರದ ವಾಲ್ಮೀಕಿ ಹಗರಣ, ಮುಡಾ ಹಗರಣ, ವಕ್ಫ್ ಭೂವಿವಾದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಹಾವೇರಿ: ಕೋವಿಡ್ ಸಮಯದಲ್ಲಿ ಪಿಪಿಈ ಕಿಟ್ ಖರೀದಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಅಯೋಗವು ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರು ತಪ್ಪಿತಸ್ಥರು ಅಂತ ವರದಿಯಲ್ಲಿ ಹೇಳಿದ್ದರೆ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಕೋರಲು ಸಿದ್ದರಾಮಯ್ಯ ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ? ಯಡಿಯೂರಪ್ಪ ಜೊತೆ ಹೊಂದಾಣಿಕೆಯಿತ್ತೇ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ತಮ್ಮನ್ನು ಟೀಕಿಸುವವರ ವಿರುದ್ಧ ಮಾತ್ರ ಸಿದ್ದರಾಮಯ್ಯ ಸರ್ಕಾರ ಎಫ್ಐಅರ್ ಗಳನ್ನು ದಾಖಲಿಸುತ್ತದೆ, ಇದೇ ಕಾರಣಕ್ಕೆ, ಸಿಟಿ ರವಿ, ಪ್ರತಾಪ್ ಸಿಂಹ, ತೇಜಸ್ವೀ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಮತ್ತು ತನ್ನ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿಗ್ಗಾವಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಬೊಮ್ಮಾಯಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ: ಬಸನಗೌಡ ಯತ್ನಾಳ್
Loading...
Unable to load recommendations.
Follow Us