AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಬೊಮ್ಮಾಯಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ: ಬಸನಗೌಡ ಯತ್ನಾಳ್

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಬೊಮ್ಮಾಯಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2024 | 12:58 PM

ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದರು. ಬಿಡಿಎ ಸೈಟುಗಳನ್ನು ಆಲಾಟ್ ಮಾಡಲು ಪ್ರತಿ ಚದರ ಅಡಿಗೆ ಡಿಕೆ ಶಿವಕುಮಾರ್ 75 ರೂ. ತೆಗೆದುಕೊಳ್ಳುತ್ತಿದ್ದಾರೆ, ಕಮೀಶನ್ ಕೊಡದಿದ್ದರೆ ಸೈಟಿಲ್ಲ, ಸಿದ್ದರಾಮಯ್ಯ ನಡೆಸುತ್ತಿರೋದು 90 ಪರ್ಸೆಂಟ್ ಕಮೀಶನ್ ಸರ್ಕಾರ ಎಂದು ಯತ್ನಾಳ್ ಹೇಳಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿಗ್ಗಾವಿ ಕ್ಷೇತ್ರದಲ್ಲಿ ಕೇವಲ ಕಾಂಗ್ರೆಸ್ ಮುಖಂಡರು ಮಾತ್ರ ಬಸವರಾಜ ಬೊಮ್ಮಾಯಿ ಅಪಸ್ವರ ಎತ್ತುತ್ತಿದ್ದಾರೆ, ಬೊಮ್ಮಾಯಿ ಅವರು 13,500 ಮನೆಗಳನ್ನು ಜನರಿಗೆ ನೀಡಿದ್ದಾರೆ, ನನಗೆ 5 ಲಕ್ಷ ರೂ.ಗಳ ಮನೆ ಬೊಮ್ಮಾಯಿ ಕಟ್ಟಿಸಿಕೊಟ್ಟಿದ್ದಾರೆ ಅಂತ ಒಬ್ಬ ದಲಿತ ಹೇಳುತ್ತಾನೆ, ವರುಣಾದಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಅವರು ಕ್ಷೇತ್ರಕ್ಕೆ ಹೋದಾಗ ಏನೂ ಕೆಲಸವಾಗಿಲ್ಲ ಅಂತ ಜನ ಗಲಾಟೆ ಮಾಡಿದ್ದರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಚರ್ಚೆ ಮುಂದೆ ಶುರುವಾಗಲಿದೆ: ಬಸನಗೌಡ ಪಾಟೀಲ್ ಯತ್ನಾಳ್