Mahadevapura MLA’s nightmare: ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶಾಸಕಿ ಮಂಜುಳಾ ಲಿಂಬಾವಳಿ ಪಲಾಯನಗೈದರು!

|

Updated on: Jun 08, 2023 | 4:53 PM

ಅವರ ಹಿಂದೆ ನಿಂತಿದವನೊಬ್ಬ ಪ್ರಾಂಪ್ಟ್ ಮಾಡುತ್ತಿದ್ದರೂ ಮಾಧ್ಯಮದವರನ್ನು ಎದುರಿಸಲಾಗದ ಮಂಜುಳಾ ಅಲ್ಲಿಂದ ಓಟಕಿತ್ತರು!

ಬೆಂಗಳೂರು: ಮಹದೇವಪುರ ಕ್ಷೇತ್ರ (Mahadevapura constituency) ಅವ್ಯವಸ್ಥೆಗಳ ಆಗರ ಅಂತ ಬೇರೆ ಗ್ರಹದವರಿಗೂ ಗೊತ್ತು. ಒತ್ತುವರಿ (encroachment) ವಿಷಯಕ್ಕೆ ಬಂದರೆ ನಗರದಲ್ಲಿ ಎಲ್ಲೂ ಕಾಣದಷ್ಟು ಅಕ್ರಮ ಇಲ್ಲಿ ಕಾಣಸಿಗುತ್ತದೆ. ರಾಜಾಕಾಲುವೆಗಳ ಮೇಲೆ ಸಿಕ್ಕಾಪಟ್ಟೆ ಅತಿಕ್ರಮಣ ಆಗಿರುವುದರಿಂದ ಮಳೆಗಾಲದಲ್ಲಿ ಕ್ಷೇತ್ರದೆಲ್ಲೆಡೆ ಪ್ರವಾಹದಂಥ ಸ್ಥಿತಿ ಉಂಟಾಗಿ ಅದೊಂದು ದ್ವೀಪದಂತೆ ಗೋಚರವಾಗುತ್ತದೆ. ಒತ್ತುವರಿ ತೆರವು ಹೆಸರಲ್ಲಿ ಬಡವರ ಮನೆಗಳನ್ನು ಒಡೆದು ಹಾಕಲಾಯಿತೇ ಹೊರತು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳನ್ನು ಹಿಂದಿನ ಶಾಸಕ ಅರವಿಂದ ಲಿಂಬಾವಳಿ ಮುಟ್ಟಲು ಬಿಡಲಿಲ್ಲ. ಈ ಬಾರಿ ಅವರ ಪತ್ನಿ ಮಂಜುಳಾ ಲಿಂಬಾವಳಿ (Manjila Limbavali) ಶಾಸಕಿಯಾಗಿದ್ದಾರೆ. ಈ ಪ್ರಶ್ನೆಗಳನ್ನೇ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಉತ್ತರಿಸಲು ತಡವರಿಸಿದರು. ಅಸಲಿಗೆ ಅವರಿಗೆ ಉತ್ತರಿಸಲು ಆಗಲೇ ಇಲ್ಲ. ಅವರ ಹಿಂದೆ ನಿಂತಿದವನೊಬ್ಬ ಪ್ರಾಂಪ್ಟ್ ಮಾಡುತ್ತಿದ್ದರೂ ಮಾಧ್ಯಮದವರನ್ನು ಎದುರಿಸಲಾಗದ ಮಂಜುಳಾ ಅಲ್ಲಿಂದ ಓಟಕಿತ್ತರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ