Kateel Temple: ಕಟೀಲು ದೇಗುಲದಲ್ಲಿ ನೀರಿಗಾಗಿ ಹಾಹಾಕಾರ, ದೇವಿ ನಮ್ಮ ಕೈಬಿಡಲ್ಲ ಎಂದ ಅರ್ಚಕರು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನೀರಿನ ಸಮಸ್ಯೆ ಕಾಡಿದೆ. ಇದೀಗ ಕಟೀಲು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ನಂದಿನಿ ನದಿ ಬತ್ತಿ ಹೋಗುತ್ತಿದೆ, ಬಿಸಿಲಿನ ಬಿಸಿಯನ್ನು ತಡೆಯಲು ಆಗುತ್ತಿಲ್ಲ. ಈ ಬಗ್ಗೆ ಅಲ್ಲಿನ ಅರ್ಚಕರು ಟಿವಿ9 ಜತೆಗೆ ಮಾತನಾಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ತಡೆಯಲಾಗುತ್ತಿಲ್ಲ, ಉರಿ ಉರಿ ಬಿಸಿಲಿಗೆ ಅಲ್ಲಿನ ಜನ ಸೋತು ಹೋಗಿದ್ದಾರೆ, ನೀರಿಗಾಗಿ ಹಾಹಾಕಾರಿಸುತ್ತಿದ್ದಾರೆ, ನೇತ್ರಾವತಿ, ಕುಮಾರಧಾರ, ನಂದಿನಿ, ಇನ್ನೂ ಸುತ್ತಮುತ್ತಲಿನ ನದಿಗಳು ಬತ್ತಿ ಹೋಗುತ್ತಿದೆ, ನೀರಿಗಾಗಿ ಮಂಗಳೂರಿನ ಜನ ದೇವರ ಮೊರೆ ಹೋಗಿದ್ದಾರೆ, ನೆನ್ನೆ (ಜೂ.8) ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ದೇವರಿಗೆ ಪೂಜೆ ಸಲ್ಲಿಸಲಾಗಿತ್ತು, ಸಂಜೆ ಭಾರೀ ಮಳೆ ಉಂಟಾಗಿದೆ. ಆದರೆ ಕಟೀಲು ಕ್ಷೇತ್ರದಲ್ಲಿ (Kateel Temple) ನಂದಿನಿ ನದಿ ಇದ್ದರು, ಇನ್ನೂ ಮಳೆಯಾಗಿಲ್ಲ. ಅಕ್ಕನ ಊರಿಗೆ ಮಳೆ ಬಂದರು, ತಂಗಿಯ ಊರಿಗೆ ಮಳೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಅರ್ಚರು ತಿಳಿಸಿರುವಂತೆ ನಂದಿನಿ ನದಿ ಜನವರಿಯಲ್ಲಿ ಹರಿಯುವುದನ್ನು ನಿಲ್ಲಿಸಿದೆ. ಇಲ್ಲಿ ಅನೇಕ ಕೆಲಸಗಳಿಗೆ ನೀರಿನ ಅಗತ್ಯ ಇದೆ. ಕಟೀಲು ಕ್ಷೇತ್ರಕ್ಕೆ ಅನೇಕ ಭಕ್ತರು ಬರುತ್ತಾರೆ. ಇಲ್ಲಿ ಅನ್ನದಾನದ ಸೇವೆಯು ನಡೆಯುತ್ತದೆ, ಅದಕ್ಕೆ ನೀರುಬೇಕು, ವಸತಿ ಗೃಹಗಳಿಗೂ ನೀರುಬೇಕು. ಶಿಕ್ಷಣ ಸಂಸ್ಥೆಗಳಿಗೂ ಕೂಡ ನೀರಿನ ಅವಶ್ಯಕತೆ ಇದೆ. ಆದರೆ ಇಲ್ಲಿ ನೀರಿನ ಕೊರತೆ ಇದೆ ಎಂದು ಹೇಳಿದ್ದಾರೆ. ಇಲ್ಲಿ ನೀರಾವರಿ ಇಲಾಖೆ ವೆನ್ ಟೇಟ್ ಡ್ಯಾಮ್ ನಿರ್ಮಾಣ ಮಾಡಲು ಅವಕಾಶ ನೀಡಿಲ್ಲ, ಆ ಕಾರಣದಿಂದ ನೀರಿನ ಶೇಖರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ದೇವಸ್ಥಾನಗಳಿಗೆ ಸಂಬಂಧಪಟ್ಟ ಕಾಲೇಜಿಗಳಿಗೆ ಮಧ್ಯಾಹ್ನದ ವರೆಗೆ ರಜೆ ನೀಡುತ್ತಿದ್ದೇವೆ, ಇದರ ಜತೆಗೆ ಈ ಪರಿಸ್ಥಿತಿಯಲ್ಲಿ ನಮ್ಮ ದೇವಿ ಬಿಡಲ್ಲ, ಮಳೆ ಕೊಟ್ಟೆ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.