ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ, ಆರೋಪಿ ವಶಕ್ಕೆ

| Updated By: ವಿವೇಕ ಬಿರಾದಾರ

Updated on: Dec 23, 2024 | 11:10 AM

ನೆಲಮಂಗಲದ ಮಾದಾವರದಲ್ಲಿರುವ ವಿನಾಯಕ ಎಂಆರ್​​ಪಿ ಬಾರ್​ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬೆಳಗ್ಗೆಯೇ ಬಾರ್ ತೆರೆದು ಎಂಆರ್​​ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಟಿವಿ9 ವರದಿಯ ನಂತರ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ಬಂಧಿಸಿ, ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ, ಡಿಸೆಂಬರ್​ 12: ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿಯ ಉದ್ಯಮಿ ಚಂದ್ರಪ್ಪ ಎಂಬುವರಿಗೆ ಸೇರಿದ ವಿನಾಯಕ ಎಮ್​ಆರ್​ಪಿ ಬಾರ್​ ಅನ್ನು ನಿಯಮ ಮೀರಿ ಬೆಳ್ಳಂ ಬೆಳಗ್ಗೆ ತೆರೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬಾರ್​ ಇದೆ. ದಿನನಿತ್ಯ ನಿಯಮ ಮೀರಿ ಬೆಳಗ್ಗೆ ಬಾರ್​ ತೆರದು, ಮದ್ಯ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೇ ಎಮ್​ಆರ್​​ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಟಿವಿ9 ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ದಾಳಿ ಮಾಡಿದರು. ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಸಿಬ್ಬಂದಿ ಅನಿಲ್​ನನ್ನು ವಶಕ್ಕೆ ಪಡೆದಿದ್ದಾರೆ. ಸಾವಿರಾರು ರೂಪಾಯಿ ಬೆಲೆಬಾಳುವ ಮದ್ಯದ ಬಾಕ್ಸ್​ ಜಪ್ತಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ