ಕುಮಾರಸ್ವಾಮಿ 2024ರಲ್ಲಿ ತಮ್ಮ ಅಂದಿದ್ದಾರೆ, 2028ರಲ್ಲಿ ಏನನ್ನುತ್ತಾರೋ ಗೊತ್ತಿಲ್ಲ: ಪ್ರೀತಂ ಜೆ ಗೌಡ, ಬಿಜೆಪಿ ನಾಯಕ

ಕುಮಾರಸ್ವಾಮಿ 2024ರಲ್ಲಿ ತಮ್ಮ ಅಂದಿದ್ದಾರೆ, 2028ರಲ್ಲಿ ಏನನ್ನುತ್ತಾರೋ ಗೊತ್ತಿಲ್ಲ: ಪ್ರೀತಂ ಜೆ ಗೌಡ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 12, 2024 | 2:51 PM

ಕುಮಾರಸ್ವಾಮಿಯವರು ಹಿರಿಯನಾಗಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತಾಡಲ್ಲ ಎಂದು ಪ್ರೀತಂ ತಾನು ಬಿಸಿರಕ್ತದ ಯುವಕನಾಗಿರುವುದರಿಂದಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 78,000 ಮತ ಪಡೆದಿದ್ದೆ, ಮಾಜಿ ಮುಖ್ಯಮಂತ್ರಿ ತನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ, ಆಗಲೇ ಅವರಿಗೆ ಕ್ಷೇತ್ರದ ನೈಜ ಸ್ಥಿತಿ ಮತ್ತು ತನ್ನ ಶಕ್ತಿ-ಸಾಮರ್ಥ್ಯದ ಬಗ್ಗೆ ಗೊತ್ತಾಗೋದು ಎಂದು ಹೇಳಿದರು.

ಹಾಸನ: ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಪ್ರೀತಂ ಜೆ ಗೌಡ (Preetham J Gowda) ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಹಾಗೆಯೇ ಹಾಸನದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯೋ ಅಥವಾ ಬಿಜೆಪಿಯದ್ದೋ ಅನ್ನೋದು ಕಗ್ಗಂಟಾಗಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸಬೇಕು ಎಂದು ಹೇಳುತ್ತಿರುವ ಪ್ರೀತಂ ಗೌಡ ಇಂದು ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪಕ್ಷದ ವರಿಷ್ಟರು ಏನು ನಿರ್ಧರಿಸುತ್ತಾರೋ ಗೊತ್ತಿಲ್ಲ, ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ ಎಂದರು. ಕುಮಾರಸ್ವಾಮಿಯವರು (HD Kumaraswamy) ತಮ್ಮನ್ನು ಸಹೋದರ (brother) ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರೀತಂ, 2024 ರಲ್ಲಿ ಸಹೋದರ ಅಂತ ಹೇಳಿದ್ದಾರೆ 2028ರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ, ತನಗೆ ಈಗೊಂದು ಆಮೇಲೊಂದು ಮಾತಾಡುವುದು ಇಷ್ಟವಿಲ್ಲ, ಏನೇ ಮಾತಾಡಿದರೂ ಜವಾಬ್ದಾರಿಯುತವಾಗಿ ಮಾತಾಡುತ್ತೇನೆ ಮತ್ತು ಆಡಿದ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು. ಕುಮಾರಸ್ವಾಮಿಯವರು ಹಿರಿಯನಾಗಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತಾಡಲ್ಲ ಎಂದು ಪ್ರೀತಂ ತಾನು ಬಿಸಿರಕ್ತದ ಯುವಕನಾಗಿರುವುದರಿಂದಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 78,000 ಮತ ಪಡೆದಿದ್ದೆ, ಮಾಜಿ ಮುಖ್ಯಮಂತ್ರಿ ತನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ, ಆಗಲೇ ಅವರಿಗೆ ಕ್ಷೇತ್ರದ ನೈಜ ಸ್ಥಿತಿ ಮತ್ತು ತನ್ನ ಶಕ್ತಿ-ಸಾಮರ್ಥ್ಯದ ಬಗ್ಗೆ ಗೊತ್ತಾಗೋದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ