Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟರಲ್ಲೇ ಈಶ್ವರಪ್ಪರಲ್ಲಿಗೆ ಹೋಗಿ ಅವರ ಗುಂಡಿಗೆ ಎದೆಯೊಡ್ಡಲಿದ್ದೇನೆ: ಡಿಕೆ ಸುರೇಶ್, ಸಂಸದ

ಇಷ್ಟರಲ್ಲೇ ಈಶ್ವರಪ್ಪರಲ್ಲಿಗೆ ಹೋಗಿ ಅವರ ಗುಂಡಿಗೆ ಎದೆಯೊಡ್ಡಲಿದ್ದೇನೆ: ಡಿಕೆ ಸುರೇಶ್, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 12, 2024 | 4:27 PM

ರಾಮನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಡಿಕೆ ಸುರೇಶ್ ಅವರು ಈಶ್ವರಪ್ಪ ಮತ್ತು ಇತರ ಬಿಜೆಪಿ ನಾಯಕರ ಉದ್ದೇಶ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುವುದಾಗಿದೆ, ಅವರು ತಮ್ಮ ಪ್ರಯತ್ನ ಮಾಡಲಿ ತಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದರು.

ರಾಮನಗರ: ಡಿಕೆ ಸಹೋದರರು (DK brothers) ಮತ್ತು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ನಡುವೆ ಬಹಳ ದಿನಗಳಿಂದ ರಾಜಕೀಯ ವೈಷಮ್ಯವಿದೆ (political rivalry). ಎದುರಾಳಿ ಪಕ್ಷಗಳ ನಡುವೆ ಅದು ಇರುತ್ತದೆ ಆದರೆ ಈ ನಾಯಕರ ನಡುವೆ ಇರುವ ವೈರತ್ವ ವಿಧಾನ ಸಭೆಯಿಂದ ಹೊರಗೆ ಬಂದ ಬಳಿಕ ಕೊನೆಗೊಳ್ಳುವಂಥದದಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಿನಿಂದ ಇದು ನಡೆದುಕೊಂಡು ಬಂದಿದೆ. ರಾಮನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಡಿಕೆ ಸುರೇಶ್ ಅವರು ಈಶ್ವರಪ್ಪ ಮತ್ತು ಇತರ ಬಿಜೆಪಿ ನಾಯಕರ ಉದ್ದೇಶ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುವುದಾಗಿದೆ, ಅವರು ತಮ್ಮ ಪ್ರಯತ್ನ ಮಾಡಲಿ ತಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಈಶ್ವರಪ್ಪನವರ ಬಳಿ ಹೋಗಲು ಸಹ ತಾನು ಸಿದ್ಧನಿರುವುದಾಗಿ ಹೇಳಿ, ಅವರ ಗುಂಡಿಗೆ ಎದೆಯೊಡ್ಡಲು ಉತ್ಸುಕನಾಗಿದ್ದೇನೆ, ಅವಲ್ಲಿಗೆ ಹೋಗುವ ಕಾಲ ಬಹಳ ದೂರವೇನಿಲ್ಲ, ಇಷ್ಟರಲ್ಲೇ ಹೋಗಲಿದ್ದೇನೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 12, 2024 04:23 PM