Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಗ್ವಿಜಯ್ ಸಿಂಗ್ ಬಟ್ಟೆ ಹರಿದು ಚಿಂದಿ ಮಾಡಿ ಅಂತ ಕಮಲ್ ನಾಥ್ ಪ್ರತಿಭಟನೆಕಾರರಿಗೆ ಹೇಳಿದ್ದು ಯಾಕೆ?

ದಿಗ್ವಿಜಯ್ ಸಿಂಗ್ ಬಟ್ಟೆ ಹರಿದು ಚಿಂದಿ ಮಾಡಿ ಅಂತ ಕಮಲ್ ನಾಥ್ ಪ್ರತಿಭಟನೆಕಾರರಿಗೆ ಹೇಳಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 17, 2023 | 2:39 PM

ಅವರು ಅಷ್ಟೇ ಹೇಳಿದ್ದರೆ ಈ ವಿಡಿಯೋ ಇಷ್ಟೆಲ್ಲ ಚರ್ಚೆಗೆ ಒಳಗಾಗುತ್ತಿರಲಿಲ್ಲ. ಮುಂದುವರಿದು ಮಾತಾಡುವ ಕಮಲ್ ನಾಥ್, ಪ್ರತಿಭಟನೆಯ ಭಾಗವಾಗಿ ಪಕ್ಷದ ಹಿರಿಯ ನಾಯಕರಾಗಿರುವ ದಿಗ್ವಿಜಯ ಸಿಂಗ್ ಮತ್ತು ಜಯವರ್ಧನ್ ಸಿಂಗ್ ಅವರ ಬಟ್ಟೆ ಹರಿದು ಹಾಕಿ ಅಂತ ಪ್ರತಿಭಟನೆಕಾರರನ್ನು ಪ್ರಚೋದಿಸುತ್ತಾರೆ!

ಭೋಪಾಲ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್​ನಾಥ್ (Kamal Nath) ಅವರು ತಮ್ಮ ಪಕ್ಷದ ಧುರೀಣ ವೀರೇಂದ್ರ ರಘುವಂಶಿಗೆ (Veerendra Raghuvanshi) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ವಿಡಿಯೋವೊಂದರಲ್ಲಿ ಆಶಯ ವ್ಯಕ್ತಪಡಿಸಿದ್ದು ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಿವಪುರಿ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ವೀರೇಂದ್ರ ರಘುವಂಶಿ ಅವರ ಬೆಂಬಲಿಗರು ಕಮಲನಾಥ್ ಅವರಲ್ಲಿಗೆ ಬಂದು ಪ್ರತಿಭಟನೆ ನಡೆಸಿದಾಗ ಹಿರಿಯ ನಾಯಕ ಹಾಗೆ ಕಾಮೆಂಟ್ ಮಾಡಿದ್ದಾರೆ. ಅವರು ಅಷ್ಟೇ ಹೇಳಿದ್ದರೆ ಈ ವಿಡಿಯೋ ಇಷ್ಟೆಲ್ಲ ಚರ್ಚೆಗೆ ಒಳಗಾಗುತ್ತಿರಲಿಲ್ಲ. ಮುಂದುವರಿದು ಮಾತಾಡುವ ಕಮಲ್ ನಾಥ್, ಪ್ರತಿಭಟನೆಯ ಭಾಗವಾಗಿ ಪಕ್ಷದ ಹಿರಿಯ ನಾಯಕರಾಗಿರುವ ದಿಗ್ವಿಜಯ ಸಿಂಗ್ (Digvijay Singh) ಮತ್ತು ಜಯವರ್ಧನ್ ಸಿಂಗ್ (Jayavardhan Singh) ಅವರ ಬಟ್ಟೆ ಹರಿದು ಹಾಕಿ ಅಂತ ಪ್ರತಿಭಟನೆಕಾರರನ್ನು ಪ್ರಚೋದಿಸುತ್ತಾರೆ!

‘ವೀರೇಂದ್ರ ರಘುವಂಶಿ ಅವರಿಗೆ ಟಿಕೆಟ್ ಸಿಗಬೇಕೆಂದು ನಾನು ಈಗಲೂ ಆಶಿಸುತ್ತೇನೆ, ಆದರೆ ವಿಷಯವನ್ನು ದಿಗ್ವಿಜಯ ಸಿಂಗ್ ಮತ್ತು ಜಯವರ್ಧನ್ ಸಿಂಗ್ ಅವರ ವಿವೇಚನೆಗೆ ಬಿಟ್ಟಿದ್ದೇನೆ. ನಾನಂದುಕೊಳ್ಳುವ ಹಾಗೆ ಯಾವುದೋ ತಪ್ಪು ಕಲ್ಪನೆ ಉಂಟಾದಂತಿದೆ. ನೀವೆಲ್ಲ ಹೋಗಿ ದಿಗ್ವಿಜಯ ಸಿಂಗ್ ಮತ್ತು ಜಯವರ್ಧನ್ ಸಿಂಗ್ ಬಳಿ ಹೋಗಿ ಅವರ ಬಟ್ಟೆ ಹರಿದು ಚಿಂದಿ ಮಾಡಿ,’ ಎಂದು ಕಮಲ್ ನಾಥ್ ಹೇಳೋದನ್ನು ವಿಡಿಯೋದಲ್ಲಿ ಕೇಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 17, 2023 02:06 PM